alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತೆ ಗೂಗಲ್ ಸಿಇಓ ಸುಂದರ್ ಪಿಚೈ ಯಶಸ್ಸಿನ ಕಥೆ

8355Sundar-Pichai

ಅವರ ಮನೆಯಲ್ಲಿ ಟಿವಿ ಇರಲಿಲ್ಲ. ದಿನ ಬಸ್ಸಿನಲ್ಲಿ ಪ್ರಯಾಣ. ಅಪ್ಪ ಯಾವಾಗಾಲಾದರೂ ಅಣ್ಣ, ತಮ್ಮ ಇಬ್ಬರನ್ನೂ ಅಮ್ಮನ ಜೊತೆ ಲ್ಯಾಂಬ್ರೆಟಾ ಸ್ಕೂಟರ್ ನಲ್ಲಿ ಹತ್ತಿಸಿದರೆ ಅದೇ ಸ್ವರ್ಗ. ಅಣ್ಣ, ತಮ್ಮ ಇಬ್ಬರೂ ಮಲಗುತ್ತಿದ್ದುದು ಮನೆಯ ಹಾಲ್ ನಲ್ಲಿ. ಕಷ್ಟಪಟ್ಟು ಓದಿ ಬೆಳೆದ ಹುಡುಗ ಇಷ್ಟು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಅವರೀಗ ಪ್ರತಿಷ್ಟಿತ ಗೂಗಲ್ ಕಂಪನಿಯ ಸಿಇಓ. ಹೀ ಈಸ್ ಅವರ್ ಪ್ರೌಡ್ ಇಂಡಿಯನ್ ಮಿಸ್ಟರ್ ಸುಂದರ್ ಪಿಚೈ.

ಕಷ್ಟಪಟ್ಟವರೇ ಮೇಲೆ ಬರಲು ಸಾಧ್ಯ. ಹಾಗೇ ಕಷ್ಟಪಟ್ಟು ಓದಿದ ಅವರು ಸಾಧನೆಯ ಉತ್ತುಂಗದಲ್ಲಿದ್ದಾರೆ. ಇತ್ತೀಚೆಗೆ ಇಂಜಿನಿಯರಿಂಗ್ ಮುಗಿಸಿದ ಯಾರನ್ನೇ ಕೇಳಿ ನೋಡಿ, ನನಗೆ ಗೂಗಲ್ ನಲ್ಲಿ ಕೆಲಸ ಸಿಗಬೇಕು ಎಂದು ಬಯಕೆ ವ್ಯಕ್ತಪಡಿಸುತ್ತಾರೆ. ಅಂತಹುದರಲ್ಲಿ ಗೂಗಲ್ ಕಂಪನಿಯ ಸಿಇಓ ಆಗೋದು ತಮಾಷೆನಾ? ಆದರೆ ಆ ತಮಾಷೆ, ಊಹೆಯ ಆಚೆಗೆ ಪರಿಶ್ರಮವಿದ್ದರೆ ಯಶಸ್ಸು ನಮ್ಮ ಕೈಬಿಡುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿ ತೋರಿಸಿದ್ದಾರೆ ಸುಂದರ್.

ಅವರ ಊರು ಚೆನ್ನೈ. ಅಲ್ಲೇ ಹುಟ್ಟಿ ಬೆಳೆದು ಬಾಲ್ಯದ ಶಿಕ್ಷಣ ಅಲ್ಲಿಯೇ ಮುಗಿಯಿತು. ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಅವರದು, ಅಪ್ಪ, ಅಮ್ಮ ಹಾಗೂ ಅಣ್ಣ, ಇಷ್ಟೇ ಪ್ರಪಂಚ. ಇದನ್ನು ಬಿಟ್ಟರೆ ಓದು, ಕ್ರಿಕೆಟ್ ಆಡುವುದು. ಎಂದೂ ಅದರಾಚೆ ಯೋಚಿಸಿದವರಲ್ಲ ಸುಂದರ್. ಮನೆಗೆ ತಡವಾಗಿ ಬರುತ್ತಿರಲಿಲ್ಲ. ಕುಂಟು ನೆಪ ಹೇಳಿ ಶಾಲೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಾರ್ಕ್ಸ್ ಕಾರ್ಡ್ ಗ್ರೇಡ್ ಯಾವತ್ತೂ ಕಡಿಮೆಯಾಗಲಿಲ್ಲ. ಮನೆಯಲ್ಲಿ ಟಿವಿ ಇಲ್ಲದಿದ್ರೂ ಆ ಬಗ್ಗೆ ಕೊರಗಲಿಲ್ಲ. ಗೆಳೆಯರು ತಮ್ಮ ತಂದೆ, ತಾಯಿ ಜೊತೆ ಕಾರಿನಲ್ಲಿ ಬಂದಾಗಲೂ ಇವರಿಗೆ ಕಾರು ಇರಬೇಕಿತ್ತು ಎಂದೇನಿಸಲಿಲ್ಲ.

ಓದಿನಲ್ಲಿ ಆಸಕ್ತಿ ಹೊಂದಿದ್ದ ಸುಂದರ್ ಏನಾದರೂ ಸಾಧಿಸಬೇಕೆಂಬ ಕನಸು ಕಂಡಿದ್ದರು. ಅವರು ತೆಗೆದ ಅಂಕಗಳಿಂದ ಖರಗ್ ಪುರ ಐಐಟಿ ಸೇರಿದರು. ಸ್ಕಾಲರ್ ಶಿಪ್ ಪಡೆದು ಓದುವುದನ್ನು ಕಲಿತಿದ್ದರು. ಪೋಷಕರಿಗೆ ಹೊರೆಯಾಗದೇ ಓದಿದರು.

ಐಐಟಿ ಯಲ್ಲಿ ಓದು, ಓದು, ಓದುವುದಷ್ಟೆ ಅವರ ಕೆಲಸ. ಅಲ್ಲಿಂದ ಉನ್ನತ ವ್ಯಾಸಂಗಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಕ್ಕೆ. ಅಲ್ಲಿಯೂ ಸ್ಕಾಲರ್ ಶಿಪ್ ಅವರ ಜೊತೆಗಿತ್ತು. ಅಮ್ಮನಿಗೆ ಮಗನನ್ನು ಅಲ್ಲಿಗೆ ಕಳಿಸಲು ಇಷ್ಟವಿರಲಿಲ್ಲ. ಸುಲಭವೂ ಇರಲಿಲ್ಲ. ಕಷ್ಟಪಟ್ಟ ಮಗನ ಜೀವನ ಚೆಂದಾಗಿರಲಿ ಎಂದು ಹಣ ಕೂಡಿಸಿಕೊಟ್ಟರು. ತ್ಯಾಗವನ್ನೂ ಮಾಡಿದರು. ಅಮೆರಿಕದ ಸ್ಪ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದರು ಸುಂದರ್.

ಅಮೆರಿಕದ ಜೀವನ ಅಷ್ಟು ಸುಲಭವಿರಲಿಲ್ಲ. ಆರಂಭದಲ್ಲಿ ಆಶ್ರಯ ಪಡೆಯಲು ಕಷ್ಟವಿತ್ತು. ಪಿಜಿ ಯಲ್ಲಿದ್ದುಕೊಂಡು ಶಿಕ್ಷಣ ಮುಂದುವರೆಸಿದರು. ಸ್ಕಾಲರ್ ಶಿಪ್ ಜೀವನ ನಡೆಸಲು ಕೈಹಿಡಿಯಿತು. ಅಲ್ಲಿ ಶಿಕ್ಷಣ ಮುಗಿಸುವ ವೇಳೆಗೆ ಮೆಕ್ ಕಿನ್ಲೆ ಕಂಪನಿಯಲ್ಲಿ ಕೆಲಸ ಆರಂಭ. ನಂತರ ಗೂಗಲ್ ಕಂಪನಿಯಿಂದ ಆಫರ್ ಬಂದಿತು. ಅಲ್ಲಿಂದ ಜೀವನ ತಿರುವು ಪಡೆಯಿತು.ಆರಂಭದಲ್ಲಿ ಗೂಗಲ್ ಕ್ರೋಮ್ ನಲ್ಲಿ ಮಹತ್ವದ ಪಾತ್ರ ವಹಿಸಿದರು. ಗೂಗಲ್ ಕ್ರೋಮ್ ಇಂದು ಪ್ರತಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿ ಇನ್ ಸ್ಟಾಲ್ ಆಗಿದ್ದರೆ ಅದರಲ್ಲಿ ಸುಂದರ್ ಪಾತ್ರ ಮುಖ್ಯವಾದುದು.

ನಂತರದಲ್ಲಿ ಗೂಗಲ್ ಡ್ರೈವ್ ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸಿದ ಅವರ ಕೆಲಸದ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಳಿಕ ಜಿ ಮೇಲ್, ಗೂಗಲ್ ಮ್ಯಾಪ್ ಡೆವಲಪ್ ಕೂಡ ಮಾಡುವಲ್ಲಿ ಶ್ರಮ ವಹಿಸುತ್ತಾರೆ. ಇಂದು ಜಗತ್ತಿನ ಮೂಲೆಮೂಲೆಯಲ್ಲಿ ಗೂಗಲ್ ವ್ಯಾಪಿಸುವಂತೆ ಕೆಲಸ ಮಾಡಿ ಅದರಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ಗೂಗಲ್ ಕಂಪನಿಯ ವಿವಿಧ ಪ್ರಾಡೆಕ್ಟ್ ಗಳನ್ನು ಶ್ರಮಿಸಿದ ಫಲ ಅವರೀಗ ಅದೇ ಕಂಪನಿಯ ಸಿಇಓ. ಏನೇ ಮಾಡಿದರೂ ಶ್ರದ್ದೆಯಿಂದ ಮಾಡಬೇಕೆಂಬ ಮನೋಭಾವ ಸುಂದರ್ ಅವರದು.

ಸುಂದರ್ ಗಿಂತ ಮೊದಲು ಸಿಇಓ ಆಗಿದ್ದ ಸಹ ಸಂಸ್ಥಾಪಕ ಲ್ಯಾರಿ ಪೇಜ್, ಯಾರನ್ನು ಆ ಸ್ಥಾನಕ್ಕೆ ತರಬೇಕೆಂದು ಹುಡುಕುತ್ತಿದ್ದರಂತೆ. ಆಗ ಸುಂದರ್ ಸಮರ್ಥರಾಗಿ ಕಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...