alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ಸೆಕ್ಸ್ ಸುಖ ಬಯಸುವವರಿಗೆ ಇಲ್ಲಿದೆ ಟಿಪ್ಸ್

ಸಂಭೋಗದ ಸಮಯದಲ್ಲಿ ಅನೇಕ ಮಹಿಳೆಯರು ಪರಾಕಾಷ್ಠೆ ತಲುಪುವುದಿಲ್ಲ. ಸಂಗಾತಿ ತಪ್ಪು ವಿಧಾನ ಅಥವಾ ಸಂಭೋಗದಲ್ಲಿ ಆಸಕ್ತಿ ಇಲ್ಲದಿರುವುದು ಪರಾಕಾಷ್ಠೆ ತಲುಪದಿರಲು ಕಾರಣವಾಗಬಹುದು. ಏನೇ ಆಗಿರಲಿ ಪರಾಕಾಷ್ಠೆ ತಲುಪದೇ ಹೋದಾಗ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಕೆಲವೊಂದು ಹವ್ಯಾಸಗಳು ಕೂಡ ಪರಾಕಾಷ್ಠೆ ತಲುಪದಿರಲು ಕಾರಣವಾಗುತ್ತದೆ. ಅದ್ರಲ್ಲಿ ಬದಲಾವಣೆ ಮಾಡಿಕೊಂಡಾಗ ಲೈಂಗಿಕ ಜೀವನ ಸುಖಕರವಾಗಿರುತ್ತದೆ.

ಸೆಕ್ಸ್ ವೇಳೆ ವೈನ್ ಸೇವನೆ ಮಾಡಿದ್ರೆ ಹಾಸಿಗೆಯಲ್ಲಿ ಹೆಚ್ಚು ಸುಖ ಪಡೆಯಬಹುದೆಂದು ಕೆಲವರು ಭಾವಿಸಿದ್ದಾರೆ. ಹಾಗಾಗಿಯೇ  ಸೆಕ್ಸ್ ವೇಳೆ ವೈನ್ ಸೇವನೆ ಮಾಡ್ತಾರೆ. ಇದ್ರಿಂದ ಮಹಿಳೆಯರ ಯೋನಿ ಶುಷ್ಕವಾಗುತ್ತದೆ. ಇದು ಪರಾಕಾಷ್ಠೆ ತಲುಪಲು ಸಾಧ್ಯವಾಗುವುದಿಲ್ಲ.

ಲೈಂಗಿಕತೆ ವೇಳೆ ಹೆಚ್ಚು ಧ್ವನಿ ತೆಗೆಯಬೇಡಿ. ಸೆಕ್ಸ್ ವೇಳೆ ಧ್ವನಿ ತೆಗೆಯುವುದ್ರಿಂದ ಪರಾಕಾಷ್ಠೆ ತಲುಪಬಹುದೆಂದು ಅನೇಕರು ಭಾವಿಸಿದ್ದಾರೆ. ಆದ್ರೆ ಇದು ತಪ್ಪು ಅಭಿಪ್ರಾಯ. ದೇಹವನ್ನು ಸಡಿಲ ಬಿಡುವುದ್ರಿಂದ ಹೆಚ್ಚು ಪರಾಕಾಷ್ಠೆ ತಲುಪಬಹುದು.

ಕೆಲ ದಂಪತಿ ಸೆಕ್ಸ್ ವೇಳೆ ಆತುರಕ್ಕೊಳಗಾಗ್ತಾರೆ. ಬೇಗ ಬೇಗ ಮುಗಿಸಲು ಮುಂದಾಗ್ತಾರೆ. ಇದು ಕೂಡ ಪರಾಕಾಷ್ಠೆ ತಲುಪದಿರಲು ಕಾರಣವಾಗುತ್ತದೆ.

ಸೆಕ್ಸ್ ವಿನೋದಕ್ಕಿಂತ ಕಡಿಮೆಯಲ್ಲ. ಸೆಕ್ಸ್ ನಲ್ಲಿ ಹೊಸ ಹೊಸ ಭಂಗಿ, ವಿಧಾನಗಳನ್ನು ಅನುಸರಿಸಬೇಕು. ಪ್ರತಿ ಬಾರಿ ಒಂದೇ ಭಂಗಿ ಬೇಸರಕ್ಕೆ ಕಾರಣವಾಗುತ್ತದೆ. ಸೆಕ್ಸ್ ಜೀವನ ಸತ್ತು ಹೋಗುತ್ತದೆ.

ಕ್ಲೈಮ್ಯಾಕ್ಸ್ ತಲುಪುವ ಮೊದಲು ಸ್ವಲ್ಪ ಸಮಯ ಕಾಯಬೇಕು. ಕೆಲವರು ಕ್ಲೈಮ್ಯಾಕ್ಸ್ ತಲುಪುತ್ತಿದ್ದೇವೆ ಎನ್ನುವ ವೇಳೆಗೆ ಸ್ವಲ್ಪ ವಿಶ್ರಾಂತಿ ಪಡೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...