alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಜೊತೆ ಆತ್ಮೀಯತೆಯಿದ್ರೆ ಹರೆಯದಲ್ಲಿ ಎಡವೋದಿಲ್ಲ ಹೆಣ್ಣುಮಕ್ಕಳು

mom

ಲೈಂಗಿಕ ಸಂಬಂಧ ಅನ್ನೋದು ನಮ್ಮ ಬದುಕಿನ ಒಂದಿಲ್ಲೊಂದು ಹಂತದಲ್ಲಿ ಅರಿವಿಗೆ ಬರುತ್ತದೆ. ಎಲ್ಲರಿಗೂ ಒಂದೇ ವಯಸ್ಸಿನಲ್ಲಿ ಸೆಕ್ಸ್ ಬಗ್ಗೆ ತಿಳುವಳಿಕೆಯಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಸಹವಾಸ ದೋಷದಿಂದ ಕೆಲ ಮಕ್ಕಳು ಅದರ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆಯೂ ಇದೆ. ಆದ್ರೆ ತಾಯಿಯ ಜೊತೆಗೆ ಆರೋಗ್ಯಕರ ಸಂಬಂಧ ಹೊಂದಿರುವ ಹೆಣ್ಣುಮಕ್ಕಳು ಸ್ವಲ್ಪ ತಡವಾಗಿ ಲೈಂಗಿಕ ಬದುಕಿನ ಬಗ್ಗೆ ತಿಳಿದುಕೊಳ್ಳುತ್ತಾರೆ ಅನ್ನೋದು ಸಂಶೋಧನೆಯಿಂದ ದೃಢಪಟ್ಟಿದೆ.

ಲೈಂಗಿಕ ವಿಷಯಗಳ ಕುರಿತು ಜಾಗೃತಿಯ ಕೊರತೆ ಮತ್ತು ಅದೇ ವಿಚಾರದ ಬಗ್ಗೆ ಪದೇ ಪದೇ ಚರ್ಚೆ ಮಾಡುವುದರಿಂದ ಹದಿಹರೆಯದವರು ಎಡವಬಹುದು. ಇದರಿಂದ ಚಿಕ್ಕ ವಯಸ್ಸಿನಲ್ಲೇ ಗರ್ಭಧಾರಣೆಯಂತಹ ಸಮಸ್ಯೆಗಳು ಉದ್ಭವಿಸುತ್ತವೆ.

ಆದ್ರೆ ಅಮ್ಮನೊಂದಿಗೆ ಆರೋಗ್ಯಕರ ಸಂಬಂಧ ಹೊಂದಿರುವ ಹೆಣ್ಣುಮಕ್ಕಳು ಹರೆಯದಲ್ಲಿ ಎಡವುವ ಸಾಧ್ಯತೆ ಕಡಿಮೆ. 12-16 ವರ್ಷ ವಯಸ್ಸಿನ ಹೆಣ್ಣು ಮತ್ತು ಗಂಡು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು, ಅವರು ತಮ್ಮ ತಾಯಿ ಜೊತೆ ಯಾವ ರೀತಿಯ ಸಂಬಂಧ ಹೊಂದಿದ್ದಾರೆಂಬುದನ್ನು ಅಧ್ಯಯನ ಮಾಡಲಾಗಿದೆ.

ತಾಯಿ ಜೊತೆ ಉತ್ತಮ ಸಂವಹನ ಮತ್ತು ಹೆಚ್ಚು ಆತ್ಮೀಯತೆ ಹೊಂದಿರುವ ಹೆಣ್ಣುಮಕ್ಕಳು ಹರೆಯದಲ್ಲಿ ಸೆಕ್ಸ್ ಬದುಕು ಪ್ರವೇಶಿಸುವ ಸಾಧ್ಯತೆ ಶೇ.44ರಷ್ಟು ಕಡಿಮೆ ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ. ಆ ವಿಷಯದ ಬಗ್ಗೆ ಮಕ್ಕಳಿಗೆ ಮೊದಲು ಪಾಠ ಮಾಡುವವಳೇ ತಾಯಿ, ಗಂಡು ಮಕ್ಕಳಿಗಿಂತ ಹೆಚ್ಚಾಗಿ ಹೆಣ್ಣು ಮಕ್ಕಳ ಜೊತೆ ಅಮ್ಮ ಮನಬಿಚ್ಚಿ ಮಾತನಾಡಲು ಸಾಧ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...