alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕನ ಜೊತೆ ರಾತ್ರಿ ಕಳೆಯುತ್ತಾಳೆ ಇಲ್ಲಿನ ವಧು..!

perna-community1-1495179045

ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಎಲ್ಲರೂ ಸಮಾನರು. ಪುರುಷ- ಮಹಿಳೆ ಎನ್ನುವ ಬೇಧವಿಲ್ಲ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಂಬಿಕೆ ಇದೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆ ಜಾರಿಗೆ ತಂದಿದ್ದಾರೆ. ಆದ್ರೆ ಈ ಎಲ್ಲ ಮಾತು, ಯೋಜನೆಗಳು ಕೆಲವೇ ಕೆಲವು ಮಂದಿಗೆ ಮಾತ್ರ ಸೀಮಿತವಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ವಿದ್ಯೆ ಕಲಿಯದ ಮಹಿಳೆಯರು ವೇಶ್ಯಾವಾಟಿಕೆಗೆ ಬಲಿಯಾಗುತ್ತಿದ್ದಾರೆ. ದೆಹಲಿಯ ನಜಾಫ್ ಗಡ್ ದ ಪ್ರೇಮ್ ನಗರದಲ್ಲಿ ಅನೇಕ ಮನೆಗಳು ಮಹಿಳೆಯರ ನೋವಿನ ಕಥೆಯನ್ನು ಹೇಳುತ್ತವೆ. ಇಲ್ಲಿನ ಹುಡುಗಿಯರಿಗೆ ಕನಸು ಕಾಣುವ ಸ್ವಾತಂತ್ರ್ಯವೂ ಇಲ್ಲ. ವಿದ್ಯೆ, ಶಾಲೆ ದೂರದ ಮಾತು. ಹೆಣ್ಣು ಹುಟ್ಟುತ್ತಿದ್ದಂತೆ ಹಬ್ಬ ಮಾಡುವ ಜನರು ದುಡಿಮೆಗೊಂದು ತಲೆ ಹೆಚ್ಚಾಯ್ತು ಎಂದುಕೊಳ್ತಾರೆ.

ಇಲ್ಲಿನ ಬಾಲಕಿಯರಿಗೆ 12-13 ವರ್ಷವಾಗ್ತಿದ್ದಂತೆ ಕಾಳ ರಾತ್ರಿಯ ಕತ್ತಲೆ ಕೂಪದಲ್ಲಿ ನರಳೋದು ಮಾಮೂಲಿಯಾಗಿಬಿಡುತ್ತದೆ. ಮಗಳು ದೊಡ್ಡವಳಾಗ್ತಿದ್ದಂತೆ ತಂದೆ-ತಾಯಿ ಆಕೆಯನ್ನು ವೇಶ್ಯಾವಾಟಿಕೆಗೆ ದೂಡುತ್ತಾರೆ. ಅದೇ ಸಮುದಾಯದ ಪುರುಷನ ಕೈ ಹಿಡಿದು ಹೊಸ ಮನೆ ಹೊಸಿಲು ದಾಟಿದ ಮಹಿಳೆಗೂ ನೆಮ್ಮದಿಯಿಲ್ಲ. ಮನೆಗೆ ಬಂದ ಸೊಸೆಗೆ ಗ್ರಾಹಕರನ್ನು ಹುಡುಕುವ ಕೆಲಸ ಗಂಡನ ಮನೆಯವರದ್ದು.

ಹಗಲು ಮನೆ ನೋಡಿಕೊಳ್ಳುವ ಮಹಿಳೆ ರಾತ್ರಿಯಾದ್ರೆ ಗ್ರಾಹಕರ ಜೊತೆ ಮಲಗಬೇಕು. ರಾತ್ರಿ ಎರಡು ಗಂಟೆ ಸುಮಾರಿಗೆ ಮನೆ ಬಿಡುವ ಮಹಿಳೆ ಬೆಳಗಾಗುವವರೆಗೆ 3-4 ಗ್ರಾಹಕನ ಜೊತೆಗಿರುತ್ತಾಳೆ. ಮೊದಲೇ ಗ್ರಾಹಕರ ಬುಕ್ಕಿಂಗ್ ಆಗಿರುತ್ತದೆ. ಸಾಕಷ್ಟು ಭಾರಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ವೇಶ್ಯಾವಾಟಿಕೆ ನಡೆಸಲು ಒಲ್ಲೆ ಎಂದ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡಿದ್ದಿದೆ. ತನ್ನ ಮಗಳಿಗೆ ವಿದ್ಯೆ ನೀಡಿ ಆಕೆಗೆ ಉತ್ತಮ ಭವಿಷ್ಯ ನೀಡಬೇಕೆಂಬ ಕನಸು ಅನೇಕ ತಾಯಂದಿರಿಗಿದೆ. ಆದ್ರೆ ಅದು ಈಡೇರುತ್ತಿಲ್ಲ. ‘ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆಗಳು ಇಲ್ಲಿಯವರೆಗೆ ತಲುಪುತ್ತಿಲ್ಲ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...