alex Certify
ಕನ್ನಡ ದುನಿಯಾ       Mobile App
       

Kannada Duniya

ಹರೆಯದಲ್ಲಿ ಹುಡುಗಿಯರು ಅನುಭವಿಸ್ತಾರೆ ಪ್ರಶ್ನೆಯ ಕಿರಿಕಿರಿ

ನೀವು ಹುಡುಗಿಯಾಗಿದ್ದು, ನಿಮ್ಮ ವಯಸ್ಸು 20 ಆಗಿದ್ದರೆ ಸಿದ್ಧವಾಗಿ. ಕೆಲವೊಂದು ಪ್ರಶ್ನೆಗಳು ನಿಮ್ಮನ್ನು ಎದುರು ನೋಡ್ತಾ ಇರುತ್ವೆ. ಆ ಪ್ರಶ್ನೆಗಳಿಗೆ ಉತ್ತರ ನೀಡಲು ಇಷ್ಟವಿರಲಿ ಬಿಡಲಿ, ನೀವು ಆ ಪ್ರಶ್ನೆಗಳನ್ನು ಎದುರಿಸಲೇಬೇಕು. ಕಾಲೇಜು ಸ್ನೇಹಿತರಿಂದ ಈ ಪ್ರಶ್ನೆಗಳು ಬರುವುದಿಲ್ಲ. ನಿಮ್ಮ ನೆರೆಹೊರೆಯವರು, ಸಂಬಂಧಿಕರಿಂದ ಬರುವ ಈ ಸವಾಲುಗಳಿಗೆ ನೀವು ಸಿದ್ಧರಾಗಿರಲೇಬೇಕು.

ಅನೇಕ ಬಾರಿ ಅವರು ಕೇಳುವ ಪ್ರಶ್ನೆಗೆ ನೀವು ಮುಗುಳ್ನಕ್ಕು ಉತ್ತರ ನೀಡಿರುತ್ತೀರಾ. ಮತ್ತೆ ಕೆಲವು ಬಾರಿ ಯಾಕಪ್ಪ ಇವರ ಕೈಗೆ ಸಿಕ್ಕಿದೆ ಎಂದು ಗೊಣಗುತ್ತಿರಾ. ನೀವು ಕೂಡ 20 ರ ಹರೆಯದಲ್ಲಿದ್ದರೆ ಈ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿಯವರೆಗೆ ಈ ಪ್ರಶ್ನೆ ಎದುರಾಗದಿದ್ದರೆ, ಇನ್ನು ಮುಂದೆ ಎದುರಾಗೇ ಆಗುತ್ತೆ. ನಿಮ್ಮ ನೆರೆಹೊರೆಯವರು ಇಲ್ಲ ಸಂಬಂಧಿಕರು ನಿಮಗೆ ಈ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ.

ಇನ್ನು ಎಷ್ಟು ಓದಲು ಬಯಸುತ್ತೀಯಾ?

ಮದುವೆ ಬಗ್ಗೆ ಏನು ಯೋಚಿಸಿದ್ದೀಯಾ? ಮದುವೆ ವಯಸ್ಸಾಯ್ತು ನಿನಗೆ.

ನಿನ್ನ ಖರ್ಚನ್ನು ನೀನೇ ನೋಡಿಕೊಳ್ತೀಯಾ ಅಥವಾ ಅಪ್ಪ-ಅಮ್ಮ ಕೊಡ್ತಾರಾ?

ನೀನು ಜೀವನದಲ್ಲಿ ಏನು ಮಾಡಲು ಬಯಸುತ್ತೀಯಾ?

ನಿನ್ನ ಜೊತೆ ಬರ್ತಾನಲ್ಲ ಅವನು ನಿನ್ನ ಬಾಯ್ ಫ್ರೆಂಡಾ?

ಅಡುಗೆ ಮಾಡಲು ಬರುತ್ತಾ? ಅನ್ನ-ಟೀ ಮಾಡುವುದನ್ನು ಕಲಿತುಕೊಂಡಿರು. ಇಲ್ಲವಾದ್ರೆ ನಿನ್ನ ಅತ್ತೆ ನಿನ್ನನ್ನು ಇಷ್ಟಪಡುವುದಿಲ್ಲ.

ಹುಡುಗ ಸಿಗ್ತಾ ಇಲ್ಲವಾ? ಮೆಟ್ರಿಮೋನಿಯಲ್ಲಿ ನಿನ್ನ ಪ್ರೊಫೈಲ್ ಹಾಕು.

ಮಕ್ಕಳಂತೆ ಬಟ್ಟೆ ಹಾಕುವುದನ್ನು ಬಿಡು.

ಸಾಮಾಜಿಕ ಜಾಲ ತಾಣದಲ್ಲಿ ಎಷ್ಟು ಹೊತ್ತು ಕಾಲ ಕಳೀತಿಯಾ? ಪ್ರತಿದಿನ ಒಂದೊಂದು ಫೋಟೋ ಹಾಕ್ತೀಯಾ?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...