alex Certify
ಕನ್ನಡ ದುನಿಯಾ       Mobile App
       

Kannada Duniya

ತಡ ರಾತ್ರಿ ಈ ಮೆಸ್ಸೇಜ್ ಗೆ ಕಾಯ್ತಾಳೆ ಹುಡುಗಿ

download

ಹುಡುಗಿಯರನ್ನು ಅರ್ಥ ಮಾಡಿಕೊಳ್ಳೋದು ಬಹಳ ಕಷ್ಟ. ಲವ್ ನಲ್ಲಿ ಬಿದ್ದ ಹುಡುಗಿಯರು ಏನೇನು ಬಯಸ್ತಾರೆ ಎಂಬುದನ್ನು ತಿಳಿದುಕೊಳ್ಳಲು ಹುಡುಗ್ರು ಕಷ್ಟಪಡ್ತಾರೆ. ಪ್ರೇಯಸಿಯನ್ನು ಡ್ರಾಪ್ ಮಾಡಿ ಮನೆಗೆ ಬಂದು ತಲುಪಿದೆ ಅಂತಾ ಮೆಸ್ಸೇಜ್ ಹಾಕು, ಗುಡ್ ನೈಟ್ ಅಂತಾ ಇನ್ನೊಂದು ಮೆಸ್ಸೇಜ್ ಹಾಕಿ ಮಲಗಿದ್ರೆ ನಿಮ್ಮ ಕೆಲಸ ಮುಗಿಯಲಿಲ್ಲ. ಗುಡ್ ನೈಟ್ ನಂತ್ರವೂ ಹುಡುಗ್ರಿಂದ ಇನ್ನೊಂದು ಮೆಸ್ಸೇಜ್ ಬಯಸ್ತಾರೆ ಹುಡುಗಿಯರು.

ನಿಮ್ಮ ಹುಡುಗಿಯನ್ನು ಭೇಟಿಯಾಗಿ ಬಂದ ಮೇಲೆ ನಿನ್ನ ಡ್ರೆಸ್ ಚೆನ್ನಾಗಿತ್ತು ಎನ್ನೋದನ್ನು ಹೇಳಲು ಮರೆತಿದ್ದರೆ ಮುಗೀತು ನಿಮ್ಮ ಕಥೆ. ಹುಡುಗಿಯರು ಡ್ರೆಸ್ ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಸಮಯ ತೆಗೆದುಕೊಳ್ತಾರೆ. ಅದ್ರಲ್ಲೂ ಪ್ರಿಯಕರನ ಭೇಟಿ ವೇಳೆ ಮತ್ತಷ್ಟು ಸುಂದರವಾಗಿರುವ ಡ್ರೆಸ್ ತೊಟ್ಟು ಬರ್ತಾರೆ. ಒಂದು ವೇಳೆ ಡ್ರೆಸ್ ಬಗ್ಗೆ ನೀವು ಹೊಗಳಿಕೆ ಮಾತನಾಡಲಿಲ್ಲವೆಂದಾದ್ರೆ ಆಕೆಗೆ ಕೋಪ ಬರೋದು ಗ್ಯಾರಂಟಿ.

ಮತ್ತೊಮ್ಮೆ ಯಾವಾಗ ಸಿಗೋಣ. ಈ ಮಾತನ್ನು ಕೇಳಲು ಹುಡುಗಿಯರು ಕಾತರರಾಗಿರುತ್ತಾರೆ. ಇಂದು ಭೇಟಿಯಾದ ನಂತ್ರ ಈ ಪ್ರಶ್ನೆ ಕೇಳುವ ಜೊತೆಗೆ ಮುಂದಿನ ಡೇಟಿಂಗ್ ಗೆ ಪ್ಲಾನ್ ಮಾಡಿ.

ಸಾಮಾನ್ಯವಾಗಿ ಹುಡುಗಿಯರ ಕಣ್ಣು ಸುಂದರವಾಗಿರುತ್ತದೆ. ಆಕೆ ಭೇಟಿ ಮಾಡಿ ಬಂದ ನಂತ್ರ ನಿನ್ನ ಕಣ್ಣು ನನ್ನನ್ನು ಇಂದು ಮತ್ತಷ್ಟು ಆಕರ್ಷಿಸ್ತು ಅಂತಾ ಒಂದು ಸಂದೇಶ ಹಾಕಿ ನೋಡಿ.

ಹುಡುಗಿಯರಿಗೆ ಹೊಗಳಿಕೆ ಅಂದ್ರೆ ಇಷ್ಟ. ನನ್ನ ಜೀವನದಲ್ಲಿ ನೀನು ಎಷ್ಟು ಇಂಪಾರ್ಟೆಂಟ್ ಎನ್ನುವ ಜೊತೆಗೆ ಆಕೆ ಡಿಪಿ ಚೆನ್ನಾಗಿದೆ ಎಂದ್ರೆ ಹುಡುಗಿ ಡಬಲ್ ಖುಷ್ ಆಗ್ತಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...