alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಎಂಜಾಯ್ ಮಾಡಲು ಇಂಥ ಬೇಡಿಕೆ ಇಡ್ತಿದ್ದಾರೆ ಮಹಿಳೆಯರು…!

ಕಳೆದ ಕೆಲ ವರ್ಷಗಳಿಂದ ಸುರಕ್ಷಿತ ಸೆಕ್ಸ್ ಬಗ್ಗೆ ಜಾಗೃತಿ ಹೆಚ್ಚಾಗಿದೆ. 2015-2016 ರಲ್ಲಿ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ನಡೆಸಿದ ಸರ್ವೆ ಪ್ರಕಾರ 10 ವರ್ಷಗಳಲ್ಲಿ ಸೆಕ್ಸ್ ಸುರಕ್ಷತೆ ಬಗ್ಗೆ ಮಹಿಳೆಯರು ಜಾಗೃತರಾಗಿದ್ದಾರಂತೆ.

ಸುರಕ್ಷಿತ ಸೆಕ್ಸ್ ಗೆ ಸಂಗಾತಿಯನ್ನು ಪ್ರೋತ್ಸಾಹಿಸುವ ಮಹಿಳೆಯರು ಗರ್ಭಧಾರಣೆ ಬಗ್ಗೆಯೂ ಹೆಚ್ಚು ಗಮನ ನೀಡ್ತಾರಂತೆ. ಸರ್ವೆ ಪ್ರಕಾರ 20 ರಿಂದ 24 ವರ್ಷದ ಮಹಿಳೆಯರು ಸೆಕ್ಸ್ ವೇಳೆ ಕಾಂಡೋಮ್ ಧರಿಸುವಂತೆ ಪುರುಷರನ್ನು ಒತ್ತಾಯಿಸುತ್ತಾರಂತೆ.

ಸರ್ವೆಯಲ್ಲಿ ಪಾಲ್ಗೊಂಡಿದ್ದ ಪುರುಷರಲ್ಲಿ ಶೇಕಡಾ 3 ರಿಂದ 8 ರಷ್ಟು ಪುರುಷರು ಗರ್ಭ ನಿರೋಧಕದ ಬಗ್ಗೆ ಮಹಿಳೆಯರು ಜಾಗೃತಿ ವಹಿಸಬೇಕು ಎನ್ನುತ್ತಾರೆ. ಪಂಜಾಬ್ ನಲ್ಲಿ ಅತಿ ಹೆಚ್ಚು ಗರ್ಭ ನಿರೋಧಕ ಬಳಸಲಾಗ್ತಿದೆ. ಗರ್ಭ ನಿರೋಧಕದ ಒಂದಲ್ಲ ಒಂದು ವಿಧಾನ ಪಂಜಾಬ್ ನ ಶೇಕಡಾ 99 ಮಹಿಳೆ ಇಲ್ಲ ಪುರುಷನಿಗೆ ತಿಳಿದಿರುತ್ತದೆ. ಗರ್ಭ ನಿರೋಧಕ ಬಳಸುವವರಲ್ಲಿ ಅವಿವಾಹಿತರು ಹಿಂದೆ ಬಿದ್ದಿಲ್ಲ. 15-49 ವರ್ಷ ವಯಸ್ಸಿನ ಶೇಕಡಾ 34ರಷ್ಟು ಮಹಿಳೆಯರು ಗರ್ಭ ನಿರೋಧಕ ಬಳಸ್ತಾರೆ. ಶೇಕಡಾ 32 ರಷ್ಟು ಮಹಿಳೆಯರು ಆಧುನಿಕ ವಿಧಾನದ ಮೊರೆ ಹೋಗ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...