alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನನ್ನೇ ಮದುವೆಯಾದ ಮಗಳು

orola-dalbot-with-her-fam-008

ಜಾತಿ, ಜನಾಂಗದಲ್ಲಿ ನಡೆದು ಬಂದ ಸಂಪ್ರದಾಯದಂತೆ ಮದುವೆಗಳು ನೆರವೇರುತ್ತವೆ. ಮದುವೆ ನಂತ್ರ ವಧು, ವರನ ಮನೆಗೆ ಹೋಗುವುದು ಸಾಮಾನ್ಯವಾಗಿ ಎಲ್ಲ ಜಾತಿಯಲ್ಲಿಯೂ ರೂಢಿಯಲ್ಲಿದೆ. ಆದ್ರೆ ಆ ಜನಾಂಗದಲ್ಲಿ ಮಾತ್ರ ಹುಡುಗಿಯರು ಮದ್ವೆಯಾಗ್ತಾರೆ. ಆದ್ರೆ ಅಮ್ಮನ ಮನೆಯನ್ನು ಬಿಟ್ಟು ಹೋಗುವುದಿಲ್ಲ. ಆ ಜನಾಂಗದ ಹುಡುಗಿಯರಿಗೆ ಅಪ್ಪನೇ ಪತಿ.

ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನಾಂಗದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಇಲ್ಲಿ ಹುಟ್ಟಿದ ಹುಡುಗಿಯರು ಅಪ್ಪನನ್ನು ಮದುವೆಯಾಗುವ ಕನಸು ಕಾಣ್ತಾರೆ. ತಲತಲಾಂತರದಿಂದ ಈ ಬುಡಕಟ್ಟು ಜನಾಂಗದಲ್ಲಿ ಅಪ್ಪನನ್ನು ಮದುವೆಯಾಗುವ ಪದ್ಧತಿ  ಜಾರಿಯಲ್ಲಿದೆ. ಒಂದು ವೇಳೆ ಕಡಿಮೆ ವಯಸ್ಸಿನಲ್ಲಿ ಪತಿ ಸಾವನ್ನಪ್ಪಿದರೆ, ಅದೇ ಕುಟುಂಬದ ಇನ್ನೊಬ್ಬ ವ್ಯಕ್ತಿಯನ್ನು ಆಕೆ ಮದುವೆಯಾಗಬೇಕಾಗುತ್ತದೆ.

ಒರೋಲಾ ಎಂಬ ಮಹಿಳೆ ಹೇಳುವಂತೆ ಆಕೆ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದನಂತೆ. ಹಾಗಾಗಿ ತಾಯಿ ಇನ್ನೊಂದು ಮದುವೆಯಾದಳಂತೆ. ಆತನನ್ನೇ ಈಗ ಒರೋಲಾ ಮದುವೆಯಾಗಿದ್ದಾಳಂತೆ. ಒರೋಲಾ ತಂದೆಯಿಂದ ಮೂರು ಮಕ್ಕಳನ್ನು ಪಡೆದಿದ್ದರೆ, ತಾಯಿಗೆ ಇಬ್ಬರು ಮಕ್ಕಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...