alex Certify
ಕನ್ನಡ ದುನಿಯಾ       Mobile App
       

Kannada Duniya

ಬರ್ಗರ್ ತಿನ್ನೋ ಆಸೆಯಾದ್ರೆ ಈ ದೇವಸ್ಥಾನಕ್ಕೆ ಬನ್ನಿ

brownie-548591_960_720

ದೇವಸ್ಥಾನಗಳಲ್ಲಿ ಪ್ರಸಾದ ಅಂದ ತಕ್ಷಣ ನಮಗೆ ನೆನಪಾಗೋದು ಪುಳಿಯೋಗರೆ, ಉಪ್ಪಿಟ್ಟು, ಪೊಂಗಲ್ ಮತ್ತು ಲಡ್ಡು. ಆದ್ರೆ ಚೆನ್ನೈನ ಪಡಪ್ಪೈನಲ್ಲಿರೋ ದೇವಸ್ಥಾನದಲ್ಲಿ ನಿಮಗೆ ವಿಶಿಷ್ಟ ರೀತಿಯ ಪ್ರಸಾದ ಸಿಗುತ್ತೆ. ಎಲ್ಲರ ಅಚ್ಚುಮೆಚ್ಚಿನ ಬ್ರೌನೀ, ಬರ್ಗರ್, ಸ್ಯಾಂಡ್ ವಿಚ್ ಮತ್ತು ಚೆರ್ರಿ ಟೊಮೆಟೋ ಸಲಾಡ್ ಅನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ಈ ಪ್ರಸಾದದ ಪ್ಯಾಕೆಟ್ ಗಳ ಮೇಲೆ ತಯಾರಿಸಿದ ದಿನಾಂಕ, ಎಕ್ಸ್ ಪೈರಿ ದಿನಾಂಕವನ್ನು ಮುದ್ರಿಸುವುದು ಕಡ್ಡಾಯ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ್ಲೂ ಅನುಮತಿ ದೊರೆತಿದೆ. ಇದು ಜಯಾ ದುರ್ಗಾ ಪೀತಮ್ ದೇವಾಲಯ. ಆಟೋಮೇಟೆಡ್ ಕಿಚನ್ ನಲ್ಲಿ ಈ ಪ್ರಸಾದಗಳನ್ನು ತಯಾರಿಸಲಾಗುತ್ತದೆ. ಪ್ರಸಾದದ ಟೋಕನ್ ಗಳನ್ನು ಭಕ್ತರು ವೆಂಡಿಂಗ್ ಮಷಿನ್ ನಲ್ಲಿ ಹಾಕಿ ಬರ್ಗರ್, ಬ್ರೌನೀ ಪಡೆಯಬಹುದು.

ಪ್ರವಾಸಿಗರು ಮತ್ತು ಭಕ್ತರನ್ನು ಸೆಳೆಯುವ ಜೊತೆಗೆ ಸ್ವಚ್ಛ, ಪೋಷಕಾಂಶವುಳ್ಳ ಪ್ರಸಾದವನ್ನು ನೀಡಬೇಕು ಅನ್ನೋ ಉದ್ದೇಶದಿಂದ ಈ ರೀತಿ ಮಾಡಲಾಗ್ತಿದೆಯಂತೆ. ಇತ್ತೀಚೆಗಷ್ಟೆ ದೇವಾಲಯದಲ್ಲಿ ಭಕ್ತರಿಗಾಗಿ ‘ಬರ್ತಡೇ ಕೇಕ್ ಪ್ರಸಾದ’ವನ್ನು ಕೂಡ ವಿತರಿಸಲಾಗ್ತಿದೆ. ಭಕ್ತರ ಹುಟ್ಟಿದ ದಿನಾಂಕ ಹಾಗೂ ಅಡ್ರೆಸ್ ಅನ್ನು ಕಂಪ್ಯೂಟರ್ ನಲ್ಲಿ ಫೀಡ್ ಮಾಡಿಕೊಳ್ಳಲಾಗುತ್ತದೆ. ಬರ್ತಡೇ ದಿನ ಪ್ರಸಾದದ ಕೇಕ್ ಅನ್ನು ಡೋರ್ ಡೆಲಿವರಿ ಮಾಡಲಾಗುತ್ತದೆ. ಬರ್ತಡೇ ದಿನ ದೇವಸ್ಥಾನಕ್ಕೆ ಬರಲು ಸಾಧ್ಯವಾಗದ ಹಿರಿಜೀವಗಳಿಗೆ ಇದರಿಂದ ಪ್ರಸಾದ ಸಿಕ್ಕಂತಾಗುತ್ತದೆ ಅನ್ನೋದು ಆಡಳಿತ ಮಂಡಳಿಯ ಅಭಿಪ್ರಾಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...