alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಣಸಿಗನಾಗಲಿರುವ ರೊಬೋಟ್

robot

ಇಂದು ಅನೇಕ ಕಾರ್ಯಗಳಲ್ಲಿ ರೊಬೋಟ್ ಬಳಕೆ ಸರ್ವೇ ಸಾಮಾನ್ಯವಾಗಿದೆ. ರೊಬೋಟ್ ನಿಂದಾಗಿ ಇಂದು ಅನೇಕ ಕೆಲಸಗಳಲ್ಲಿ ಮಾನವನ ಪಾಲಿಲ್ಲದಂತಾಗಿದೆ. ಇಷ್ಟೆಲ್ಲ ಕೆಲಸ ಮಾಡುವ ರೊಬೋಟ್ ಈಗ ಅಡಿಗೆ ಕೆಲಸಕ್ಕೂ ಕೈ ಹಾಕಲಿದ್ದಾನೆ.

ಜರ್ಮನಿಯ FZI ಕಂಪನಿಯ ವಿಜ್ಞಾನಿಗಳು ರೊಬೋಟ್  ಅನ್ನು ಅಡಿಗೆ ಭಟ್ಟನನ್ನಾಗಿ ಮಾಡುವ ತಯಾರಿ ನಡೆಸಿದ್ದಾರೆ. ಈ ತಯಾರಿ ಈಗಾಗಲೇ ಯಶಸ್ಸನ್ನು ಕಂಡಿದೆ. ಬಾಣಸಿಗ ರೊಬೋಟ್ ಸಖತ್ ಆಗಿ ಅಡುಗೆ ಮಾಡುತ್ತಾನಂತೆ.

ಬ್ರಾಟ್ವರ್ಸ್ಟ್ ಬಾಟ್ ಹೆಸರಿನ ಈ ರೊಬೋಟ್ ಸಾಸೇಜ್ ಎಂಬ ಮಾಂಸದ ಖಾದ್ಯವನ್ನು ತಯಾರಿಸುತ್ತದೆ. ಖಾದ್ಯವನ್ನು ತಯಾರಿಸಿ ಪ್ಲೇಟ್ ಗೆ ಹಾಕುವ ತನಕ ಎಲ್ಲ ಕೆಲಸವನ್ನೂ ಸ್ವತಃ ರೊಬೋಟ್ ಮಾಡಲಿದೆ. ಮಾಂಸದಡುಗೆ ಸರಿಯಾಗಿ ಬೆಂದಿದೆಯೇ ಎಂದು ನೋಡಲು ಕ್ಯಾಮರಾ ಕಣ್ಗಾವಲು ಇದೆ.

ಅಡುಗೆ ತಯಾರಾಗುವ ತನಕ ಕಣ್ಣು, ಮೀಸೆ ಹೊಂದಿರುವ ಇನ್ನೊಂದು ಟ್ಯಾಬ್ ಗ್ರಾಹಕರನ್ನು ಮಾತನಾಡಿಸುತ್ತದೆಯಂತೆ. ಈ ಟ್ಯಾಬ್, ಗ್ರಾಹಕರೊಂದಿಗೆ ಮಾತನಾಡುವುದರ ಜೊತೆಗೆ ಅಡುಗೆಯ ಮಾಹಿತಿ ಕೂಡ ಒದಗಿಸುತ್ತದೆ. ಈಗಾಗಲೇ ಬ್ರಾಟ್ವರ್ಸ್ಟ್ ಬಾಟ್ ರೊಬೋಟಿನ ಅಡುಗೆಯ ಪ್ರಾತ್ಯಕ್ಷಿಕೆ ನಡೆದಿದ್ದು, ಒಟ್ಟು 200 ಸಾಸೇಜ್ ಅನ್ನು ಮಾಡಿಕೊಡುವಲ್ಲಿ ಈ ರೊಬೋಟ್ ಯಶಸ್ವಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...