alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಚತುರ್ಥಿಗೆ ಸಜ್ಜಾಗಿದೆ ಕಣಿವೆ ರಾಜ್ಯ ಕಾಶ್ಮೀರ

ಗಣೇಶ ಚತುರ್ಥಿ ಬಂದೇ ಬಿಟ್ಟಿದೆ. ವಿಘ್ನ ನಿವಾರಕನ ಸ್ವಾಗತಕ್ಕೆ ಭಕ್ತಗಣ ತಯಾರಿ ಮಾಡಿಕೊಳ್ತಿದೆ. ದೇಶದೆಲ್ಲೆಡೆ ಸಂಭ್ರಮ ಮನೆಮಾಡಿದೆ. ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿರೋ ಪೂಂಛ್ ಜಿಲ್ಲೆಯಲ್ಲೂ ಗಣೇಶ ಹಬ್ಬದ ಸಿದ್ಧತೆ ಬಲು ಜೋರಾಗಿದೆ.

ಸ್ಥಳೀಯರು ಹಾಗೂ ಸೈನಿಕರು ಇಲ್ಲಿ ಜೊತೆಯಾಗಿ ಗಣಪತಿ ಹಬ್ಬ ಆಚರಣೆ ಮಾಡ್ತಾರೆ. ಮುಂಬೈನಲ್ಲಿ ತಯಾರಾದ ವಿಶಿಷ್ಟ ಗಣೇಶ ಮೂರ್ತಿಯನ್ನು ಹಬ್ಬಕ್ಕಾಗಿ ತರಿಸಲಾಗಿದೆ. ‘ಭಾರತ-ಪಾಕಿಸ್ತಾನ ಬಾರ್ಡರ್ ಕಾ ರಾಜಾ’ ಎಂದು ಅದಕ್ಕೆ ಹೆಸರಿಡಲಾಗಿದೆ.

ಪ್ರಾಚೀನ್ ಶಿವ್ ದುರ್ಗಾ ಮಂದಿರ ಟ್ರಸ್ಟ್ ವತಿಯಿಂದ 6 ಅಡಿ ಎತ್ತರದ ಗಣೇಶ ಮೂರ್ತಿಯನ್ನು ತರಲಾಗಿದೆ. ಬಾಂದ್ರಾ ಜಮ್ಮು ತವಿ ಸ್ವರಾಜ್ ಎಕ್ಸ್ ಪ್ರೆಸ್ ಮೂಲಕ ಗಣಪತಿ ಬಪ್ಪ ಮುಂಬೈನಿಂದ ಕಾಶ್ಮೀರ ತಲುಪಿದ್ದಾನೆ. 7 ವರ್ಷಗಳ ಹಿಂದೆ ಪೂಂಛ್ ನಲ್ಲಿ ಗಣೇಶ ಚತುರ್ಥಿ ಆಚರಣೆಯನ್ನು ಆರಂಭಿಸಲಾಗಿತ್ತು.

ಈ ವರ್ಷ ಕೂಡ ಆಗಸ್ಟ್ 25ರಿಂದ ಸೆಪ್ಟೆಂಬರ್ 5 ರವರೆಗೆ ಗಣೇಶೋತ್ಸವ ನಡೆಯಲಿದೆ. ಸೆಪ್ಟೆಂಬರ್ 5ರಂದು ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...