alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಖರ್ಚು ಮಾಡದೆ ಮಗಳಿಗೆ ಇಂಥ ಬಟ್ಟೆ ನೀಡಿದ ಕಲಾವಿದೆ ತಾಯಿ

ಕಲೆಗೆ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ. ಕಲೆಗೆ ಯಾವುದೇ ಗಡಿಯಿಲ್ಲ. ಕಲೆಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಹೊಸ ಹೊಸ ಪ್ರಯೋಗ ಜನರನ್ನು ಆಕರ್ಷಿಸುತ್ತದೆ. ಇದಕ್ಕೆ ಟರ್ಕಿಯ ಅಂಟಲ್ಯದ ನಿವಾಸಿ ಅಲಿಯಾ ಚವಾರ್ ಉತ್ತಮ ಉದಾಹರಣೆ.

ಸೃಜನಾತ್ಮಕ ಛಾಯಾಗ್ರಹಣದ ಮೂಲಕ ಸಾವಿರಾರು ಜನರ ಮನಸ್ಸು ಕದ್ದಿದ್ದಾರೆ ಅಲಿಯಾ. ತನ್ನ ಮೂರು ವರ್ಷದ ಮಗಳು ಸ್ಟಿಫೇನಿ ಅಲಿಯಾಳ ಮಾಡೆಲ್. ಆಲಿಯಾ ಮಗಳ ಬಟ್ಟೆ ಬಗ್ಗೆ ಸೃಜನಾತ್ಮಕವಾಗಿ ಯೋಚನೆ ಮಾಡಿದ್ರು. ತರಕಾರಿ, ಹಣ್ಣು, ಸೊಪ್ಪನ್ನು ಔಟ್ಲೆಟ್ ಮಾಡಿಕೊಂಡು ಮಗಳ ಫೋಟೋ ಕ್ಲಿಕ್ಕಿಸಿದ್ದಾರೆ.

ಆಲಿಯಾ ಈ ಫೋಟೋಕ್ಕೆ ಪ್ರಪಂಚದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. 60 ಸಾವಿರಕ್ಕೂ ಹೆಚ್ಚು ಮಂದಿ ಈಕೆ ಫ್ಯಾನ್ ಆಗಿದ್ದಾರೆ. ಕಲ್ಲಂಗಡಿ ಹಣ್ಣನ್ನು ತಿನ್ನುವಾಗ ಈ ಐಡಿಯಾ ಬಂತಂತೆ. ಮೊದಲು ಪ್ರಯೋಗ ಮಾಡಿ ನೋಡಿದ್ದಾರೆ. ನಂತ್ರ ಬಾಳೆ ಹಣ್ಣಿನಿಂದ ಹಿಡಿದು ಹೂ, ತರಕಾರಿಗಳು ಮಗಳ ಬಟ್ಟೆಯಾಗಿವೆ.

ವಿಶ್ವದಾದ್ಯಂತ ಸ್ಟಿಫೀನ್ ಫೋಟೋಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಇನ್ಸ್ಟ್ರಾಗ್ರಾಮ್ ಬಳಕೆದಾರರು ಹೊಸ ಫೋಟೋದ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...