alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಗಳಿಗೆ ಮಾದರಿ ಮಧ್ಯಪ್ರದೇಶದ ಸುರಭಿ….

ಸುರಭಿ ಗೌತಮ್ ಜನಿಸಿದ್ದು ಸಂಪ್ರದಾಯಸ್ಥ ಮಧ್ಯಮ ವರ್ಗದ ಕುಟುಂಬದಲ್ಲಿ. ಮಧ್ಯಪ್ರದೇಶದ ಅಮ್ದರ ಇವರ ಹುಟ್ಟೂರು. ಬಾಲ್ಯದಲ್ಲಿ ಸಂಧಿವಾತ ಜ್ವರದಿಂದ ಬಳಲಿದ್ದ ಸುರಭಿ, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದರು. ಆದ್ರೀಗ ದೇಶದ ಕೋಟ್ಯಾಂತರ ಜನಕ್ಕೆ ಪ್ರೇರಣೆಯಾಗಿದ್ದಾರೆ ಅವರು.

ಆತ್ಮವಿಶ್ವಾಸವೊಂದಿದ್ರೆ ಮಹಿಳೆ ಏನನ್ನು ಬೇಕಾದ್ರೂ ಸಾಧಿಸಬಹುದು ಅನ್ನೋದಕ್ಕೆ ಇವರೇ ಉತ್ತಮ ನಿದರ್ಶನ. ಪ್ರತಿವರ್ಷ ಗಣಿತದಲ್ಲಿ 100ಕ್ಕೆ ನೂರು ಅಂಕ ಪಡೆಯುತ್ತಿದ್ದ ಸುರಭಿ, 10ನೇ ತರಗತಿಯಲ್ಲೂ ಉತ್ತಮ ಅಂಕಗಳೊಂದಿಗೆ ಮೆರಿಟ್ ಸೀಟು ಗಿಟ್ಟಿಸಿಕೊಂಡಿದ್ದರು.

10ನೇ ಕ್ಲಾಸ್ ಮುಗಿಯುತ್ತಿದ್ದಂತೆ, ತಾನು ಕಲೆಕ್ಟರ್ ಆಗಬೇಕು ಅನ್ನೋ ಆಸೆ ಅವರಲ್ಲಿ ಮೂಡಿತ್ತು. 12ನೇ ತರಗತಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಅಬ್ದುಲ್ ಕಲಾಂ ವಿದ್ಯಾರ್ಥಿ ವೇತನ ಗಿಟ್ಟಿಸಿಕೊಂಡ್ರು. RGVP ಭೋಪಾಲ್ ನಲ್ಲಿ ಎಂಜಿನಿಯರಿಂಗ್ ಗೆ ಪ್ರವೇಶ ಪಡೆದ್ರು.

ಆ ಸಮಯದಲ್ಲಿ ಸುರಭಿಗೆ ಇಂಗ್ಲಿಷ್ ನಲ್ಲಿ ಚೆನ್ನಾಗಿ ಮಾತನಾಡಲು ಬರುತ್ತಿರಲಿಲ್ಲ. ಹಿಂದಿ ಮಾಧ್ಯಮದಲ್ಲಿ ಓದಿದ್ದರಿಂದ ಇಂಗ್ಲಿಷ್ ನಲ್ಲಿ ಮಾತನಾಡಲು ಕಷ್ಟವಾಗುತ್ತಿತ್ತು. ಆದ್ರೆ ಇಂಗ್ಲಿಷ್ ಕಲಿಯಲೇಬೇಕು ಎಂಬ ಹಠ ಅವರಲ್ಲಿತ್ತು. ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಸುರಭಿ SAIL, BARC, GATE, ISRO, MPPSC ಪರೀಕ್ಷೆ ಬರೆದಿದ್ದರು. ಅದಾಗಿ 6 ತಿಂಗಳ ಬಳಿಕ IES ಪರೀಕ್ಷೆಗೂ ಹಾಜರಾದ್ರು. ವಿಶೇಷ ಅಂದ್ರೆ ಸುರಭಿ ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ರು. ಯುಪಿಎಸ್ಸಿ ಸಿವಿಲ್ ಸರ್ವೀಸ್ ಗೂ ಆಯ್ಕೆಯಾಗುವ ಮೂಲಕ ತಮ್ಮ ಕನಸನ್ನು ಪರಿಶ್ರಮದಿಂದ್ಲೇ ನನಸು ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...