alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ತ ಸಂಬಂಧಕ್ಕಿಂತ ಸ್ನೇಹ ಸಂಬಂಧ ಮಿಗಿಲು….

ಜಾತಿ, ಹಣ, ಮೇಲು, ಕೀಳು, ಅಂತಸ್ತು ಈ ಎಲ್ಲ ಚೌಕಟ್ಟನ್ನು ಮೀರಿ, ಸಮಾಜದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿರೋದು ಗೆಳೆತನ. ಎಂತಹದ್ದೇ ಕಾರ್ಯವಿದ್ದರೂ, ಬೆನ್ನ ಹಿಂದೆ ಕುಟುಂಬ ಹಾಗೂ ಸ್ನೇಹಿತರು ನಿಂತರೆ ಅದರ ತೂಕಾನೇ ಬೇರೆ. ಎರಡು ದೇಹಗಳಲ್ಲಿ ಉಸಿರಾಡುವ ಒಂದೇ ಜೀವವೆಂದರೆ ಅದು ಸ್ನೇಹ ಅಂದವನು ಖ್ಯಾತ ದಾರ್ಶನಿಕ ಅರಿಸ್ಟಾಟಲ್.

ಕಷ್ಟ-ಸುಖ, ಏಳು-ಬೀಳು, ಸಮ್ಮಾನ-ಅವಮಾನ, ಜೀವನದಲ್ಲಿ ಬಂದಾಗ ಹೆಗಲು ಕೊಡುವವನೇ ನಿಜವಾದ ಸ್ನೇಹಿತ. ಹೀಗಾಗಿ ಭಾರತೀಯ ಸಮಾಜದಲ್ಲಿ ಸ್ನೇಹಿತನಿಗೆ ಶ್ರೇಷ್ಠ ಸ್ಥಾನ ಇದೆ. ಪುರಾಣ ಕಾಲದಲ್ಲಿಯೂ ಗೆಳೆತನದ ಮಹತ್ವವನ್ನು ತಿಳಿಸಲಾಗಿದೆ. ಕರ್ಣ ಮತ್ತು ದುರ್ಯೋಧನ, ಕೃಷ್ಣ ಹಾಗೂ ಸುಧಾಮ, ರಾಮ ಮತ್ತು ಸುಗ್ರೀವರ ಸ್ನೇಹ ಇದಕ್ಕೆ ಒಳ್ಳೆಯ ಉದಾಹರಣೆ.

ಹಣ ಸಂಪಾದನೆಗಿಂತ ಉತ್ತಮ ಸ್ನೇಹಿತರನ್ನು ಸಂಪಾದಿಸು ಎಂದು ಹಿರಿಯರು ಹೇಳಿದ್ದಾರೆ. ದೋಸ್ತಿ ಅಂದ್ರೆನೇ ಹಾಗೆ. ಭಾರತದಲ್ಲಿ ಈ ಸಂಬಂಧಕ್ಕೆ ಬೆಲೆ ಕಟ್ಟಲಾಗದ ನಂಟು…ನಂಬಿಕೆ, ವಿಶ್ವಾಸದ ತಳಹದಿಯಲ್ಲಿ, ಹೆಮ್ಮರವಾಗಿ ಬೆಳೆದ ವೃಕ್ಷವೇ ಗೆಳೆತನ. ಅದಕ್ಕಾಗಿ ಹೇಳೋದು ರಕ್ತ ಸಂಬಂಧಕ್ಕಿಂತಲೂ ಸ್ನೇಹ ಸಂಬಂಧ ಮಿಗಿಲು ಎಂದು. ‘ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಹಿಂದೆ ಇದ್ದರೆ ಗೆಳೆಯ
ಯಾವುದೇ ಸನ್ನಿವೇಶ ಎದುರಿಸಲು ಇರೋಲ್ಲ ಭಯ, ಪುರಾಣಗಳೂ ಸಹ ಹಾಕಿವೆ ಗೆಳೆತನಕ್ಕೆ ಪಾಯ’.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...