alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಅಗ್ಗದ ಮೊಬೈಲ್ Freedom 251 ಎಂಡಿ ಪತ್ನಿ ಈಗ ಫೇಮಸ್

freedom3

ಸದ್ಯ ಎಲ್ಲರ ಚರ್ಚೆಯ ಕೇಂದ್ರ ಬಿಂದು Freedom 251 ಸ್ಮಾರ್ಟ್ ಫೋನ್. ಶುಕ್ರವಾರದಿಂದ Freedom251 ಸ್ಮಾರ್ಟ್ ಫೋನ್ ಬುಕ್ಕಿಂಗ್ ಶುರುವಾಗಿದೆ. ಈಗಾಗಲೇ ವಿಶ್ವದ ಅತ್ಯಂತ ಅಗ್ಗದ ಮೊಬೈಲ್ ಬಗ್ಗೆ ಸಾಕಷ್ಟು ಸುದ್ದಿಗಳು ಪ್ರಸಾರವಾಗ್ತಾನೆ ಇದೆ. ಸಾವಿರಾರು ಮಂದಿ ಆನ್ಲೈನ್ ನಲ್ಲಿ ಮೊಬೈಲ್ ಬುಕ್ ಮಾಡಿ ಮೇಲ್ ಗಾಗಿ ಕಾಯ್ತಾ ಇದ್ದಾರೆ. ಹಾಗಾಗಿ ಇದ್ರ ಬಗ್ಗೆ ಏನೇ ಸುದ್ದಿ ಬಂದ್ರೂ ಕುತೂಹಲ ಸಹಜ.

ರಿಂಗಿಂಗ್ ಬೆಲ್ ಕಂಪನಿ ಈ ಮೊಬೈಲ್ ತಯಾರಿಸಿದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಹಾಗೆ ಇದ್ರ ಎಂಡಿ ಮೋಹಿತ್ ಗೋಯಲ್ ಎಂಬುದು ಗೊತ್ತು. ಮೋಹಿತ್ ಗೋಯಲ್ ಹಿನ್ನೆಲೆ ಏನು? ಅವರ ತಂದೆ ಏನು ಕೆಲಸ ಮಾಡ್ತಿದ್ದರು? ಹೀಗೆ ಅಗ್ಗದ ಮೊಬೈಲ್ ತಯಾರಿಸಿದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಹಾಗೆ ಮೊಬೈಲ್ ಬಗ್ಗೆಯೂ ಜನ ಸಾಕಷ್ಟು ತಿಳಿದುಕೊಂಡಿದ್ದಾರೆ.

ಈಗ ಮೋಹಿತ್ ಗೋಯಲ್ ಪತ್ನಿ ಬಗ್ಗೆ ವರದಿಯೊಂದು ಪ್ರಸಾರವಾಗಿದೆ. ಮೋಹಿತ್ ಗೋಯಲ್ ಪತ್ನಿ ರಿಂಗಿಂಗ್ ಬೆಲ್ ಸಿಇಓ ಎಂಬ ವಿಚಾರ ನಿಮಗೆ ಗೊತ್ತಿರಬಹುದು. ಈ ಧಾರಣಾ ಗೋಯಲ್ ಮೂಲತಃ ದೆಹಲಿಯವರು. ಪತಿ ಜೊತೆ ಅವರು ನೋಯ್ಡಾದಲ್ಲಿ ನೆಲೆಸಿದ್ದಾರೆ.

ಸ್ಪೆಕ್ಟ್ರಮ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಹಾಗೂ ಆರ್ಕಿಟೆಕ್ಚರ್ ನಲ್ಲಿ ಅಧ್ಯಯನ ನಡೆಸಿದ್ದಾರೆ. ಹಿಂದಿನ ವರ್ಷ ಡಿಸೆಂಬರ್ ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಈ ವರ್ಷ ಜನವರಿಯಲ್ಲಿ ಮದುವೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...