alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರವಾಗಿದ್ದೀರಾ ? ಹಾಗಿದ್ರೆ ಈ ಹೋಟೆಲ್ ನಲ್ಲಿ ಊಟ ಫ್ರೀ !!

free meals

ನೀವು ನೋಡೋಕೆ ತುಂಬಾ ಚೆನ್ನಾಗಿದೀರಾ..? ಹಾಗಿದ್ರೆ ನಿಮಗೆ ಹೊಟ್ಟೆ ತುಂಬಾ ಊಟ ಫ್ರೀ ! ಏನ್ ತಮಾಷೆ ಅಂದ್ಕೊಂಡ್ರಾ. ಇಲ್ಲ ಕಣ್ರೀ ಇದು ಸತ್ಯ. ಚೀನಾದ ಹೋಟೆಲ್ ಒಂದು ಇಂತಹ ಆಫರ್ ನೀಡಿ ಗ್ರಾಹಕರನ್ನು ಸೆಳೆಯುತ್ತಿದೆ.

ಹೌದು .ಚೀನಾದ ಜೆಂಗ್ಜುಹು ಪ್ರಾಂತ್ಯದಲ್ಲಿನ ಒಂದು ನಗರದಲ್ಲಿರುವ ಕೊರಿಯಾ ಶೈಲಿಯ ಹೋಟೆಲ್ ಒಂದು ಈ ಮೂಲಕ ತನ್ನ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ‘ಫ್ರೀ ಮೀಲ್ ಫಾರ್ ಗುಡ್ ಲುಕಿಂಗ್’ ಎಂಬ ಹೆಸರಿನಲ್ಲಿ ಪುಕ್ಸಟ್ಟೆ ಊಟ ನೀಡಲು ಮುಂದಾಗಿದೆ.

ಆದರೆ ಗ್ರಾಹಕರು ಊಟವನ್ನು ಆರ್ಡರ್ ಮಾಡುವ ಮುನ್ನ ಸೌಂದರ್ಯ ತಜ್ಞರು, ಪ್ಲಾಸ್ಟಿಕ್ ಸರ್ಜರಿ ತಜ್ಞರಿರುವ ತಂಡದ ಎದುರು ಹಾಜರಾಗಬೇಕಿದ್ದು, ಮಷಿನ್‌ ವೊಂದು ಗ್ರಾಹಕರ ಫೋಟೊವನ್ನು ಸೆರೆ ಹಿಡಿಯುತ್ತದೆ. ನಂತರ ತೀರ್ಪುಗಾರರು ಸ್ಪರ್ಧಿಗಳ ಮುಖ, ಕಣ್ಣು, ಮೂಗು, ಗದ್ದ ಹಾಗೂ ಹಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾರು ನಿಜಕ್ಕೂ ಸುರ ಸುಂದರರು ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಉಚಿತವಾಗಿ ಪುಷ್ಕಳ ಭೋಜನ ನೀಡಲಾಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.

ಹೋಟೆಲ್ ನ ಈ ಪುಕ್ಸಟ್ಟೆ ಊಟದ ಆಫರ್ ನಿಂದ ಜನ ಹೋಟೆಲ್ ಎದುರು ಕ್ಯೂ ನಿಲ್ಲುತ್ತಿದ್ದು, ವ್ಯಾಪಾರದಲ್ಲಿಯೂ ಸಾಕಷ್ಟು ಏರಿಕೆ ಕಂಡಿದೆಯಂತೆ. ಆದರೆ ಅಲ್ಲಿನ ಮಹಿಳೆಯರು ಮಾತ್ರ ತಮ್ಮ ‘ನೈಜ ಬಣ್ಣ’ ಬಯಲಾಗಬಹುದೆಂಬ ಭಯದಿಂದ ಗಂಡಂದಿರ ಜತೆಗೆ ಅಲ್ಲಿಗೆ ಹೋಗಲು ಮನಸ್ಸೇ ಮಾಡುತ್ತಿಲ್ಲವಂತೆ.!!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...