alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿಗೆ ಜನ್ಮ ನೀಡಲಿದ್ದಾನೆ ಈ ಪುರುಷ

3bf48c5400000578-4098204-image-a-2_1483915838729

ವಿಜ್ಞಾನ ಬಹಳ ಮುಂದುವರೆದಿದೆ. ಈಗ ಪುರುಷರು ಕೂಡ ಮಗುವಿಗೆ ಜನ್ಮ ನೀಡಬಹುದಾಗಿದೆ. ಲಂಡನ್ ನ ವ್ಯಕ್ತಿಯೊಬ್ಬ ಮಗುವಿಗೆ ಜನ್ಮ ನೀಡಿದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರನಾಗಲಿದ್ದಾನೆ. ಫೇಸ್ಬುಕ್ ನಲ್ಲಿ ಸಿಕ್ಕ ವೀರ್ಯದಾನಿ ಸಹಾಯದಿಂದ ಈತ ಗರ್ಭ ಧರಿಸಿದ್ದಾನೆ.

ವಾಸ್ತವವಾಗಿ ಹೇಡನ್ ಕ್ರಾಸ್ 20 ವರ್ಷಗಳ ಹಿಂದೆ ಹೆಣ್ಣಾಗಿ ಜನ್ಮತಾಳಿದ್ದ. ಪುರುಷನಾಗುವ ಆಸೆಯಿಂದ ಹೇಡನ್ ಚಿಕಿತ್ಸೆಗೆ ಒಳಪಟ್ಟು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾನೆ. ಕಾನೂನಿನ ಪ್ರಕಾರ ಆತ ಪುರುಷನಾಗಿದ್ದಾನೆ. ಆದ್ರೆ ಮಗುವಿಗೆ ಜನ್ಮ ನೀಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತಂತೆ. ಹಾಗಾಗಿ ಫೇಸ್ಬುಕ್ ಮೊರೆ ಹೋಗಿದ್ದಾನೆ. ಅಲ್ಲಿ ವೀರ್ಯದಾನಿಯೊಬ್ಬರ ಸಹಾಯದಿಂದ ಗರ್ಭ ಧರಿಸಿದ್ದಾನೆ. ನಾಲ್ಕು ತಿಂಗಳ ಭ್ರೂಣ ಆತನ ಹೊಟ್ಟೆಯಲ್ಲಿದೆ.

ಪೂರ್ಣ ಲಿಂಗ ಪರಿವರ್ತನೆ ನಂತ್ರ ಸ್ತನ ಹಾಗೂ ಅಂಡಾಶಯವಿರುವುದಿಲ್ಲ. ಹಾಗಾಗಿ ಹೇಡನ್ ತನ್ನ ಮಗುವಿಗೆ ಸ್ತನಪಾನ ಮಾಡಿಸಲು ಸಾಧ್ಯವಿಲ್ಲ. ಯುಕೆಯಲ್ಲಿ ಪೂರ್ಣ ಲಿಂಗ ಪರಿವರ್ತನೆಗೆ 20 ಸಾವಿರ ಪೌಂಡ್ ಖರ್ಚಾಗುತ್ತದೆ. ಲಿಂಗ ಪರಿವರ್ತನೆ ವೇಳೆ ಸುಮಾರು 6 ಶಸ್ತ್ರಚಿಕಿತ್ಸೆ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...