alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಸೆಕ್ಸ್ ಮುನ್ನ….

ಸಂಬಂಧದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರವಹಿಸುತ್ತದೆ. ಸಂಭೋಗವಿಲ್ಲದೆ ದಾಂಪತ್ಯದಲ್ಲಿ ರುಚಿಯಿಲ್ಲ. ಹಾಗಂತ ಸಂಬಂಧ ಚಿಗುರೊಡೆಯುತ್ತಿರುವ ಸಮಯದಲ್ಲೇ ಸೆಕ್ಸ್ ಸಮಂಜಸವಲ್ಲ. ಆತುರದ ನಿರ್ಧಾರ ಸಂಬಂಧ ಹಾಳು ಮಾಡಬಹುದು. ಹಾಗೆ ತುಂಬಾ ವರ್ಷಗಳ ಕಾಲ ಇದಕ್ಕಾಗಿ ಕಾಯುವುದೂ ಅಸಾಧ್ಯ.

ಆನ್ಲೈನ್ ವೈದ್ಯಕೀಯ ಸಲಹೆ ನೀಡುವ DrEd.com ಈ ಬಗ್ಗೆ ಸಮೀಕ್ಷೆ ನಡೆಸಿದೆ. ಅದ್ರಲ್ಲಿ ಸಂಗಾತಿ ಮಧ್ಯೆ ಮೊದಲ ಸೆಕ್ಸ್ ಗೂ ಮುನ್ನ ಎಷ್ಟು ಸಮಯ ನೀಡಬೇಕು ಎಂಬುದನ್ನು ಹೇಳಲಾಗಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 50ರಷ್ಟು ಮಂದಿ ಸಂಗಾತಿ ಜೊತೆ ಮೊದಲ ಬಾರಿ ಶಾರೀರಿಕ ಸಂಬಂಧ ಬೆಳೆಸಲು ಒಂದು ವಾರದಿಂದ ಒಂದು ತಿಂಗಳವರೆಗೆ ಸಮಯ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಸರ್ವೆಯಲ್ಲಿ 1 ಸಾವಿರ ಅಮೆರಿಕಾ ಹಾಗೂ ಯುರೋಪಿನ ಜೋಡಿಗಳು ಪಾಲ್ಗೊಂಡಿದ್ದರು. ಇದ್ರಲ್ಲಿ ಶೇಕಡಾ 21ರಷ್ಟು ಮಂದಿ ಮೊದಲ ಬಾರಿ ಸಂಗಾತಿ ಜೊತೆ ಸಂಬಂಧ ಬೆಳೆಸಲು 2ರಿಂದ 6 ತಿಂಗಳು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.

ತಜ್ಞರ ಪ್ರಕಾರ ತುಂಬಾ ಸಮಯ ಕಾಯುವಿಗೆ ಒತ್ತಡವನ್ನು ಹೆಚ್ಚು ಮಾಡುತ್ತದೆಯಂತೆ. ದಂಪತಿ ಮಧ್ಯೆ ಒತ್ತಡಕ್ಕೆ ಕಾರಣವಾಗುತ್ತದೆ. ಒಬ್ಬರಿಗೆ ಇಷ್ಟವಾಗಿದ್ದು ಇನ್ನೊಬ್ಬರಿಗೆ ಇಷ್ಟವಾಗದೆ ಇರುವ ಸಾಧ್ಯತೆಯಿರುತ್ತದೆ.

ತಜ್ಞರ ಪ್ರಕಾರ ಇದಕ್ಕೆ ಯಾವುದೇ ಸಮಯದ ಮಿತಿಯಿಲ್ಲ. ಇದು ಸಂಪೂರ್ಣ ಸಂಗಾತಿಗಳ ಮೇಲೆ ಅವಲಂಬಿಸಿರುತ್ತದೆ. ಸಂಗಾತಿಗಳು ಮಾನಸಿಕವಾಗಿ ಮೊದಲು ಹತ್ತಿರವಾಗಲು ಬಯಸ್ತಾರೆ. ಪರಸ್ಪರ ಅರಿತ ನಂತ್ರ ಸಂಬಂಧ ಬೆಳೆಸಲು ಮುಂದಾಗ್ತಾರೆ ಎಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...