alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಮೊದಲ ಮಾರುತಿ ಕಾರ್ ಮಾಲೀಕರ್ಯಾರು ಗೊತ್ತಾ…?

maruti car

ಇಂದು ದೇಶದ ರಸ್ತೆಗಳಲ್ಲಿ ಸ್ವದೇಶಿ ನಿರ್ಮಿತ ಐಷಾರಾಮಿ ಕಾರುಗಳಿಂದ ಹಿಡಿದು ವಿದೇಶದ ವಾಹನಗಳೂ ಸಂಚರಿಸುತ್ತಿವೆ. ಆದರೆ 80 ರ ದಶಕದಲ್ಲಿ ಮಾರುತಿ 800 ಕಾರು ಹೊಂದಿದ್ದರೆಂದರೆ ಅದು ಪ್ರತಿಷ್ಟೆಯ ಸಂಕೇತ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಲ್ಲೊಂದು ಇಲ್ಲೊಂದು ಮಾರುತಿ 800 ಕಾರುಗಳನ್ನು ಜನ ಬೆರಗುಗಣ್ಣುಗಳಿಂದ ನೋಡುತ್ತಿದ್ದರು.

1983 ರ ಡಿಸೆಂಬರ್ 14 ರಂದು ಗುರಗಾಂವ್ ನ ಕಾರ್ಖಾನೆಯಿಂದ ಬಿಳಿ ಬಣ್ಣದ ಮೊತ್ತ ಮೊದಲ ಮಾರುತಿ 800 ಕಾರ್ ಹೊರ ಬಂದಿದ್ದು, ಮೊದಲ ಕಾರ್ ಪಡೆಯಲು ಆನೇಕರು ಸರದಿ ಸಾಲಿನಲ್ಲಿ ನಿಂತಿದ್ದ ಕಾರಣ ಅದೃಷ್ಟಶಾಲಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿತ್ತು.

ಭಾರತೀಯ ವಾಯುಪಡೆಯಲ್ಲಿದ್ದ ಹರ್ಪಾಲ್ ಸಿಂಗ್ ಎಂಬವರು ಲಾಟರಿಯಲ್ಲಿ ವಿಜೇತರಾಗುವ ಮೂಲಕ ಈ ಕಾರಿನ ಕೀ ಯನ್ನು ಖುದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದಲೇ ಪಡೆದಿದ್ದರು.

ಮಾರುತಿ 800 ಕಾರ್ ಖರೀದಿಸುವ ಮುನ್ನ ಹರ್ಪಾಲ್ ಸಿಂಗ್ ಫಿಯೆಟ್ ಕಾರು ಹೊಂದಿದ್ದು, ಬಳಿಕ ಅದನ್ನು ಮಾರಾಟ ಮಾಡಿದ್ದರು. ಅಂದು ಕೇವಲ 47,500 ರೂ. ಗಳಿಗೆ ಹರ್ಪಾಲ್ ಸಿಂಗ್ ಮಾರುತಿ 800 ಕಾರನ್ನು ಖರೀದಿಸಿದ್ದು, ಹೆಚ್ಚುವರಿಯಾಗಿ 1 ಲಕ್ಷ ರೂ. ನೀಡುತ್ತೇನೆಂದರೂ ಹರ್ಪಾಲ್ ಈ ಕಾರನ್ನು ಯಾರಿಗೂ ಮಾರಾಟ ಮಾಡಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...