alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ವೇತಭವನದ ಪ್ರಥಮ ಕೃಷ್ಣವರ್ಣೀಯ ವರದಿಗಾರ್ತಿಯ ವ್ಯಥೆ ಕೇಳಿ….

ಕೆಂಟುಕಿಯಲ್ಲಿ ಜನಿಸಿದ ಪತ್ರಕರ್ತೆ ಅಲಿಸ್ ಡುನ್ನಿಗನ್ ಅವರು ಅಮೆರಿಕದ ಶ್ವೇತಭವನ, ಕಾಂಗ್ರೆಸ್, ಸುಪ್ರೀಂಕೋರ್ಟ್ ಹಾಗೂ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ವರದಿಗಾರಿಕೆಯ ಅನುಮತಿ ಪಡೆದುಕೊಂಡ ಮೊದಲ ಆಫ್ರಿಕನ್- ಅಮೆರಿಕನ್ ಮಹಿಳೆಯೆನಿಸಿಕೊಂಡಿದ್ದಾರೆ.

1940 ರ ದಶಕದಲ್ಲಿ ಶ್ವೇತಭವನದ ವರದಿಗಾರಿಕೆ ಮಾಡುವ ಮಹಿಳೆಯರೇ ವಿರಳವಾಗಿದ್ದರು, ಅದರಲ್ಲೂ ಆಫ್ರಿಕಾ ಮೂಲದ ಕೃಷ್ಣವರ್ಣೀಯರು ಇರಲೇ ಇಲ್ಲ. ಹೀಗೆ ವಾಷಿಂಗ್ಟನ್‌ನಲ್ಲಿ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ಕಾಲದಲ್ಲೂ ಅಲಿಸ್ ಅವರ ವೈಯಕ್ತಿಕ ಬದುಕು ಶೋಚನೀಯವಾಗಿತ್ತು.

ಪ್ರತಿ ಶನಿವಾರ ಆಕೆಗೆ ಊಟ ಸಿಗಬೇಕೆಂದರೆ ತನ್ನ ವಾಚ್ ಅನ್ನು ಅಡ ಇಡಬೇಕಾಗಿತ್ತು. ಸೋಮವಾರ ಬೆಳಗ್ಗೆ ಪೇ ಚೆಕ್ ಕೈಗೆ ಸಿಕ್ಕಿದ ಬಳಿಕ ಹಣ ನೀಡಿ ವಾಚ್ ಬಿಡಿಸಿಕೊಳ್ಳುವ ಸ್ಥಿತಿ ಆಕೆಯದಾಗಿತ್ತು. ಇದೊಂದು ಅಮಾನವೀಯ ಪದ್ಧತಿಯಾಗಿತ್ತು ಎಂದು 1974ರಲ್ಲಿ ಬರೆದ ತನ್ನ ಜೀವನ ಚರಿತ್ರೆ “ಎ ಬ್ಲಾಕ್ ವುಮನ್ಸ್ ಎಕ್ಸ್ ಪೀರಿಯೆನ್ಸ್ – ಫ್ರಂ ಸ್ಕೂಲ್‌ ಹೌಸ್ ಟು ವೈಟ್‌ ಹೌಸ್” ನಲ್ಲಿ ಬರೆದುಕೊಂಡಿದ್ದಾರೆ.

“ವಾಚ್ ಅಡ ಇಟ್ಟಾಗ ಐದು ಡಾಲರ್‌ಗಿಂತ ಹೆಚ್ಚು ನನಗೆ ಕೊಡುತ್ತಿರಲಿಲ್ಲ. ಅದು ಭಾನುವಾರದ ಊಟಕ್ಕಷ್ಟೇ ಸಾಕಾಗುತ್ತಿತ್ತು” ಎಂದು ಆಕೆ ಬರೆದುಕೊಂಡಿದ್ದಾರೆ. ಇದಾದ ಬಳಿಕ ಬಾಡಿಗೆ ಮನೆಗೆ ಹೋಗಿ, ಕುಲುಮೆಯಲ್ಲಿ ಕಲ್ಲಿದ್ದಲು ಕೆಲಸ ಮಾಡಬೇಕಿತ್ತು. ಅದು ಬಾಡಿಗೆ ಬಾಬ್ತು ಮಾಡುತ್ತಿದ್ದ ಕೆಲಸವಾಗಿತ್ತು ಎಂದು ಕೃಷ್ಣವರ್ಣೀಯರ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿದ್ದ ಅನ್ಯಾಯದ ಕಥೆಯನ್ನು ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...