alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಗರ್ಲ್ ಫ್ರೆಂಡ್ ಗೆ ಇನ್ನೊಬ್ಬ ಬಾಯ್ ಫ್ರೆಂಡ್ ಇದ್ದಾನಾ? ಹೀಗೆ ಪತ್ತೆ ಹಚ್ಚಿ

ನಿಜವಾಗಿ ಪ್ರೀತಿಗೆ ಬಿದ್ದ ಹುಡುಗಿಯರು ಯಾವುದನ್ನೂ ಮುಚ್ಚಿಡುವುದಿಲ್ಲ. ಆದ್ರೆ ಕೆಲ ಹುಡುಗಿಯರು ಸಂಬಂಧದಲ್ಲಿದ್ದೂ ಇನ್ನೊಬ್ಬ ಹುಡುಗನ ಜೊತೆ ಫ್ಲರ್ಟ್ ಮಾಡ್ತಿರುತ್ತಾರೆ. ಹುಡುಗಿ ನನ್ನ ಜೊತೆ ಕೇವಲ ಫ್ಲರ್ಟ್ ಮಾಡ್ತಿದ್ದಾಳಾ ಅಥವಾ ಸಂಬಂಧ ಮುಂದುವರೆಸುವ ಆಸೆಯಿದ್ಯಾ ಎಂಬುದನ್ನು ತಿಳಿದುಕೊಳ್ಳುವುದು ಸುಲಭವಲ್ಲ. ಕೆಲ ವಿಧಾನಗಳನ್ನು ಬಳಸಿ ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು.

ಕಮಿಟೆಡ್  ಹುಡುಗಿ ನಿಮ್ಮ ಜೊತೆ ಫ್ಲರ್ಟ್ ಮಾಡ್ತಿದ್ದಾಳೆಂದ್ರೆ ಆಕೆ ಬಾಯ್ ಫ್ರೆಂಡ್ ಗಿಂತ ಹೆಚ್ಚು ನಿಮ್ಮ ಜೊತೆ ಮಾತನಾಡ್ತಾಳೆ. ಪ್ರತಿ ಕ್ಷಣವೂ ನಿಮ್ಮ ಜೊತೆಗಿರಲು ಹಾಗೂ ನಿಮ್ಮ ಜೊತೆ ಮಾತನಾಡಲು ಬಯಸ್ತಾಳೆ. ನಿಮ್ಮ ಸ್ನೇಹಿತರನ್ನೂ ತನ್ನ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಹುಡುಗಿ ಸಂಗಾತಿಗಿಂತ ಹೆಚ್ಚು ನಿಮ್ಮ ಬಗ್ಗೆ ಚಿಂತಿಸ್ತಾಳೆ.

ಪ್ರೀತಿಗೆ ಬಿದ್ದವರು ಸಾಮಾನ್ಯವಾಗಿ ತಾವು ಪ್ರೀತಿಸಿದವರ ಬಗ್ಗೆ ಹೆಚ್ಚೆಚ್ಚು ಮಾತನಾಡ್ತಾರೆ. ಆದ್ರೆ ಪ್ರೀತಿಯಿಂದ ಹೊರ ಬರಲು ಬಯಸಿದ್ರೆ ಅಂಥ ಹುಡುಗಿಯರು ತಮ್ಮ ಸಂಗಾತಿ ಬಗ್ಗೆ ಏನೂ ಮಾತನಾಡುವುದಿಲ್ಲ.

ರಾತ್ರಿ ಪೂರ್ತಿ ಸಂಗಾತಿ ಬಿಟ್ಟು ನಿಮ್ಮ ಜೊತೆ ಮಾತನಾಡ್ತಿದ್ದಾಳೆಂದ್ರೆ ಆಕೆ ನಿಮ್ಮ ಜೊತೆ ಫ್ಲರ್ಟ್ ಮಾಡ್ತಿದ್ದಾಳೆ ಎಂದೇ ಅರ್ಥ.

ಬಾಯ್ ಫ್ರೆಂಡ್ ಜೊತೆಗಿದ್ದಾಗ ಅಪ್ಪಿತಪ್ಪಿ ನೀವು ಸಿಕ್ಕರೆ ನಿಮ್ಮ ಜೊತೆ ನಾಟಕವಾಡ್ತಾಳೆ. ನಿಮ್ಮನ್ನು ಅಪರಿಚಿತರಂತೆ ನೋಡ್ತಾಳೆ.

ಇಂಥ ಸಂದರ್ಭದಲ್ಲಿ ಹುಡುಗಿ ಜೊತೆ ಮಾತನಾಡಿ. ಫ್ಲರ್ಟ್ ಮಾಡ್ತಿದ್ದಾಳಾ ಇಲ್ಲ ಸಂಬಂಧ ಮುಂದುವರೆಸಲು ಬಯಸಿದ್ದಾಳಾ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ನೀನು ನನ್ನ ಸ್ನೇಹಿತ ಎಂದಷ್ಟೇ ಹುಡುಗಿ ಹೇಳಿದ್ರೆ ಆ ಸಂಬಂಧದಿಂದ ತಕ್ಷಣ ಹೊರಗೆ ಬನ್ನಿ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...