alex Certify ಮಹಿಳಾ ‘ಕಾಂಡೋಮ್’ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ‘ಕಾಂಡೋಮ್’ ಕುರಿತು ಇಲ್ಲಿದೆ ಮಾಹಿತಿ

ಸಂಭೋಗದ ವೇಳೆ ಕೆಲ ಪುರುಷರು ಕಾಂಡೋಮ್ ಬಳಸಲು ಇಚ್ಛಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಸುರಕ್ಷತೆಗಾಗಿ ಮಹಿಳೆಯರು ಕಾಂಡೋಮ್ ಧರಿಸಬಹುದು. ಅನೇಕ ವರ್ಷಗಳ ಹಿಂದೆಯೇ ಮಹಿಳಾ ಕಾಂಡೋಮ್ ಮಾರುಕಟ್ಟೆಗೆ ಬಂದಿದ್ದರೂ ಅದ್ರ ಬಗ್ಗೆ ಸರಿಯಾದ ಮಾಹಿತಿ ಮಹಿಳೆಯರಿಗಿಲ್ಲ.

ಮಹಿಳಾ ಕಾಂಡೋಮ್ ಖರೀದಿಯಿಂದ ಹಿಡಿದು, ಅದನ್ನು ಬಳಸಿದ್ರೆ ಎಷ್ಟು ಉತ್ತಮ ಎಂಬ ಪ್ರಶ್ನೆ ಜೊತೆಗೆ ಅದನ್ನು ಹೇಗೆ ಬಳಸಬೇಕೆನ್ನುವ ಪ್ರಶ್ನೆ ಈಗಲೂ ಮಹಿಳೆಯರನ್ನು ಕಾಡುತ್ತಿದೆ. ಅದು ಎಷ್ಟು ಸುರಕ್ಷಿತ? ಕಾಂಡೋಮ್ ಬಳಕೆಯಿಂದ ಮತ್ತೊಂದು ಯಡವಟ್ಟಾದ್ರೆ, ಆರೋಗ್ಯದ ಮೇಲೆ ಹಾನಿಯಾದ್ರೆ ಹೀಗೆ ಅನೇಕ ಪ್ರಶ್ನೆಗಳು ಮಹಿಳೆಯರನ್ನು ಕಾಡುತ್ತವೆ. ಇದ್ರ ಬಗ್ಗೆ ಸ್ವಲ್ಪವೂ ಮಾಹಿತಿಯಿಲ್ಲದ ಮಹಿಳೆಯರೂ ಇದ್ದಾರೆ.

ಪುರುಷರಂತೆ ಮಹಿಳೆಯರಿಗೂ ಕಾಂಡೋಮ್ ಇದೆ. ಸಂಭೋಗದ ವೇಳೆ ಮಹಿಳೆಯರು ಇದನ್ನು ಬಳಸಬಹುದಾಗಿದೆ. ಗರ್ಭಧಾರಣೆ ತಪ್ಪಿಸಲು ಹಾಗೂ ಸೋಂಕು ಹರಡದಂತೆ ರಕ್ಷಣೆ ಪಡೆಯಲು ಮಹಿಳೆಯರು ಕಾಂಡೋಮ್ ಬಳಸ್ತಾರೆ. ಇದನ್ನು ಸರಿಯಾಗಿ ಉಪಯೋಗ ಮಾಡಿದಲ್ಲಿ ಅದು ಶೇಕಡಾ 95ರಷ್ಟು ಗರ್ಭಧಾರಣೆಯ ವಿರುದ್ಧ ರಕ್ಷಣೆ ನೀಡುತ್ತದೆ.

ವಜಿನಾ ತುಂಬಾ ಒಣಗುವ ಮಹಿಳೆಯರಿಗೆ ಈ ಕಾಂಡೋಮ್ ಬಳಕೆ ಉಪಯೋಗಕಾರಿ. ಇದು ನಯವಾಗಿದ್ದು, ಬಳಸುವುದು ಸುಲಭ. ಪುರುಷರ ಕಾಂಡೋಮ್ ನಂತೆ ಒಮ್ಮೆ ಬಳಸಿದ ಮಹಿಳಾ ಕಾಂಡೋಮ್ ಇನ್ನೊಮ್ಮೆ ಬಳಕೆಗೆ ಬರುವುದಿಲ್ಲ. ಜೊತೆಗೆ ಅದನ್ನು ತಯಾರಿಸಿದ ದಿನಾಂಕದಿಂದ ಐದು ವರ್ಷ ಮಾತ್ರ ಬಳಕೆ ಮಾಡಬಹುದು.

ಪುರುಷರು ಕಾಂಡೋಮ್ ಬಳಸುವ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆ ಮಹಿಳೆಯರಿಗೆ ಅವಶ್ಯವಿಲ್ಲ. ಕಾಂಡೋಮ್ ಇಲ್ಲದೆ ಸಂಭೋಗ ನಡೆಸಿದಾಗ ಸಿಗುವ ಸುಖ ಮಹಿಳಾ ಕಾಂಡೋಮ್ ಧರಿಸಿದಾಗಲು ಸಿಗುತ್ತದೆ. ಈ ಬಗ್ಗೆ ಸಂಗಾತಿಗಳು ಭಯಪಡುವ ಅಗತ್ಯವಿಲ್ಲ. ಅನಗತ್ಯ ಗರ್ಭಧಾರಣೆ ತಡೆಯಲು ಇದು ಉತ್ತಮ ವಿಧಾನ. ಆದ್ರೆ ಈಗ್ಲೂ ಇದು ಅಷ್ಟು ಯಶಸ್ಸು ಗಳಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...