alex Certify
ಕನ್ನಡ ದುನಿಯಾ       Mobile App
       

Kannada Duniya

ಭತ್ತದ ಸಸಿಗಳಲ್ಲೇ ಅರಳಿದೆ ಮನಮೋಹಕ ಕಲಾಕೃತಿ

rice-paddy-fields-650_650x400_51497868317

ಚೀನಾದ ಶೆನ್ಯಾಂಗ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲೊಂದು. ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಅಲ್ಲಿನ ರೈತರು ಅದ್ಭುತ ಕಾರ್ಯವೊಂದನ್ನು ಮಾಡಿದ್ದಾರೆ. ಮಣ್ಣಿನ ಮಕ್ಕಳೆಲ್ಲ ಕಲಾವಿದರಾಗಿ ಬದಲಾಗಿದ್ದಾರೆ.

2

ಇವರ ಭತ್ತದ ಗದ್ದೆಗಳೆಲ್ಲ ಕಲಾಕೃತಿಗಳಾಗಿ ಮಾರ್ಪಟ್ಟಿವೆ. ಅತ್ಯಂತ ವಿಶಿಷ್ಟ ವಿನ್ಯಾಸದಲ್ಲಿ ಇವರು ಕೃಷಿ ಮಾಡ್ತಾರೆ.

3

ಬೇರೆ ಬೇರೆ ಬಣ್ಣ ಮತ್ತು ಎತ್ತರದಲ್ಲಿ ಭತ್ತದ ಸಸಿಗಳು ಬೆಳೆಯುವಂತೆ ವಿಶಿಷ್ಟವಾಗಿ ನಾಟಿ ಮಾಡುತ್ತಾರೆ. ವರ್ಷದ ಆರಂಭದಲ್ಲಿ ಸ್ಕೆಚ್ ಸಿದ್ಧಪಡಿಸಲಾಗುತ್ತದೆ, ನಂತರ ಅಲ್ಲಿ ಸಸಿಗಳನ್ನು ಬೆಳೆಯುತ್ತಾರೆ.

ಭತ್ತ ಕಟಾವಿಗೆ ಬರುವ ವೇಳೆಗೆ ಇಡೀ ಗದ್ದೆ ಸುಂದರವಾದ ಕಲಾಕೃತಿಯಾಗಿ ಮಾರ್ಪಟ್ಟಿರುತ್ತದೆ. ಸುಮಾರು 25 ಎಕರೆ ಪ್ರದೇಶದಲ್ಲಿ ಈ ಅದ್ಭುತ ಕಲಾಕೃತಿಗಳು ಅರಳಿ ನಿಂತಿವೆ.

1

ಡ್ರ್ಯಾಗನ್, ಆನೆ, ಚಿಟ್ಟೆಗಳು, ಕುಂಗ್ ಫೂ ಪಾಂಡಾದ ಮಾಸ್ಟರ್ ಪೋ ಪಿಂಗ್ ಹೀಗೆ ಎಲ್ಲವೂ ಈ ಗದ್ದೆಯಲ್ಲೇ ಇದೆ. ಜುಲೈನಿಂದ ಸೆಪ್ಟೆಂಬರ್ ವರೆಗೂ ಈ ಗದ್ದೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...