alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣಗಳಿಂದಾಗಿಯೇ ದೂರಾಗುತ್ತಿದ್ದಾರೆ ಪತಿ-ಪತ್ನಿ

ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಜನರಿಗೆ ಒಂದು ರೀತಿಯ ಹುಚ್ಚು ಹಿಡಿಸಿವೆ. ಸೋಶಿಯಲ್ ಮೀಡಿಯಾ ಇಲ್ಲದೆ ಬದುಕೇ ಇಲ್ಲ ಎಂಬಂತಾಗಿದೆ ಸದ್ಯದ ಸ್ಥಿತಿ. ಆದ್ರೀಗ ಜಾಲತಾಣಗಳೇ ವಿಚ್ಛೇದನಕ್ಕೂ ಕಾರಣವಾಗ್ತಿವೆ.

ಆನ್ ಲೈನ್ ನಲ್ಲಿ ಅಫೇರ್ ಇಟ್ಟುಕೊಳ್ಳಲು ಸಾಮಾಜಿಕ ತಾಣಗಳು ಸಹಾಯ ಮಾಡ್ತಿವೆ. ಇದರಿಂದ ವಿಚ್ಛೇದನಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಆನ್ ಲೈನ್ ನಲ್ಲಿ ಒಂದೇ ಬಾರಿ 5 ಅಫೇರ್ ಇಟ್ಟುಕೊಳ್ಳಬಹುದು. ಫ್ಲರ್ಟ್ ಮಾಡಲು ಇದು ಬೆಸ್ಟ್ ಪ್ಲೇಸ್ ಆಗ್ಬಿಟ್ಟಿದೆ.

ಕಳೆದ 5 ವರ್ಷಗಳಲ್ಲಿ ವಿಚ್ಛೇದನಗಳ ಪ್ರಮಾಣ ಗಣನೀಯ ಏರಿಕೆ ಕಂಡಿದ್ದು, ಇದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳು ಅನ್ನೋದು ಸಮೀಕ್ಷೆಯಿಂದ ದೃಢಪಟ್ಟಿದೆ. ಬಹುತೇಕ ಡಿವೋರ್ಸ್ ಕೇಸ್ ಗಳಿಗೆಲ್ಲ ಅಕ್ರಮ ಸಂಬಂಧವೇ ಕಾರಣ ಎನ್ನುತ್ತಾರೆ ವಕೀಲರು.

ತಂತ್ರಜ್ಞಾನದ ಅಭಿವೃದ್ಧಿ ಸಂಗಾತಿಗೆ ಸುಲಭವಾಗಿ ಮೋಸಮಾಡಲು ಸಹಕಾರಿಯಾಗ್ತಿದೆ. ಡೇಟಿಂಗ್ ವೆಬ್ ಸೈಟ್ ಗಳು ಅಕ್ರಮ ಸಂಬಂಧಕ್ಕೆ ಹಾದಿ ಮಾಡಿಕೊಡ್ತಿವೆ. ಹಾಗಾಗಿ ಸಾಮಾಜಿಕ ತಾಣಗಳನ್ನು ಸದುದ್ದೇಶಕ್ಕೆ ಬಳಸಿಕೊಂಡಲ್ಲಿ ಸಂಸಾರವನ್ನು ಕಾಪಾಡಿಕೊಂಡು ಹೋಗಬಹುದು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...