alex Certify
ಕನ್ನಡ ದುನಿಯಾ       Mobile App
       

Kannada Duniya

ವಾದ-ವಿವಾದಕ್ಕೆ ಕಾರಣವಾಯ್ತು ಫೇಸ್ಬುಕ್ ನಲ್ಲಿ ಮಹಿಳೆ ಕೇಳಿದ ಪ್ರಶ್ನೆ

pregnant-women

ಎಲ್ಲ ವಿಷಯಗಳನ್ನು ಖುಲ್ಲಂಖುಲ್ಲಾ ಚರ್ಚಿಸುವ ವೇದಿಕೆಯಾಗಿದೆ ಸಾಮಾಜಿಕ ಜಾಲತಾಣ. ಆದ್ರೆ ಇದೇ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಮಹಿಳೆಯೊಬ್ಬಳು ಕೇಳಿದ ಪ್ರಶ್ನೆ ಆಕೆಯನ್ನು ಕಷ್ಟಕ್ಕೆ ಸಿಲುಕಿಸಿದೆ. ತಾನು ಗರ್ಭಿಣಿ. ತನಗೆ ಹುಟ್ಟುವ ಮಗು ಬಿಳಿ ಬಣ್ಣದಲ್ಲಿರಬೇಕೆಂದ್ರೆ ನಾನೇನು ಮಾಡಬೇಕು ಎಂದು ಆಕೆ ಪ್ರಶ್ನೆ ಇಟ್ಟಿದ್ದಾಳೆ.

ವಾಸ್ತವವಾಗಿ ಮಹಿಳೆ ತಾನು ಏನು ತಿನ್ನಬೇಕು ಎನ್ನುವ ವಿಷಯವನ್ನು ಈ ರೀತಿ ಕೇಳಿದ್ದಾಳೆ. ಆದ್ರೆ ಜನರು ಇದನ್ನು ತಪ್ಪು ತಿಳಿದಿದ್ದಾರೆ. ವರ್ಣಬೇಧ ಮಾಡ್ತಿದ್ದಾಳೆಂದು ಆರೋಪಿಸಿದ್ದಾರೆ. ಆಕೆ ಪ್ರಶ್ನೆಯನ್ನು ಕೆಲವರು ಗಂಭೀರವಾಗಿ ತೆಗೆದುಕೊಂಡ್ರೆ ಮತ್ತೆ ಕೆಲವರು ಜೋಕ್ ಆಗಿ ಉತ್ತರಿಸಿದ್ದಾರೆ.

ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಬೇಕಿತ್ತು ಅಂತಾ ಒಬ್ಬರು ಹೇಳಿದ್ರೆ, ಫೇರ್ ಆಗುವ ಕ್ರೀಂ ತಿನ್ನಿ ಎಂತಾ ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ ಹಸಿರು ತರಕಾರಿ ತಿಂದ್ರೆ ಹುಟ್ಟುವ ಮಗು ಹಸಿರು ಬಣ್ಣದಲ್ಲಿ ಹುಟ್ಟುತ್ತಾ ಎಂದಿದ್ದಾನೆ. ಇದಕ್ಕೆ ಮಹಿಳೆ ಸಮರ್ಥನೆ ನೀಡಿದ್ದಾಳೆ. ಒಂದು ಸುಂದರ ಹಾಗೂ ಆರೋಗ್ಯಪೂರ್ಣ ಮಗು ಪಡೆಯಲು ಬಯಸುತ್ತಿದ್ದು, ತಾಯಿಯಾದವಳು ಇದನ್ನು ಬಯಸುವುದು ತಪ್ಪಾ ಎಂದು ಕೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...