alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ಹೆಚ್ಚು ಖುಷಿ ನೀಡುತ್ತೆ ವಿವಾಹೇತರ ಸಂಬಂಧ…!

ವಿವಾಹೇತರ ಸಂಬಂಧದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಖುಷಿಯಾಗಿರುತ್ತಾರಂತೆ. ಹೀಗಂತ ಅಧ್ಯಯನವೊಂದು ಹೇಳಿದೆ. ಅಮೆರಿಕಾ ಮಿಸೌರಿ ಸ್ಟೇಟ್ ಯೂನಿವರ್ಸಿಟಿ ಸಹಾಯಕ ಪ್ರೊಫೆಸರ್ ಅಲಿಸಿಯಾ ವಾಕರ್ ಇತ್ತೀಚಿಗಷ್ಟೆ ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ವಿವಾಹೇತರ ಸಂಬಂಧ ಹೊಂದಿದ್ದವರ ಸಮೀಕ್ಷೆ ನಡೆಸಿ ಈ ವರದಿ ನೀಡಿದ್ದಾರೆ.

ಒಂದು ಸಾವಿರಕ್ಕೂ ಹೆಚ್ಚು ಮಂದಿ ಸಮೀಕ್ಷೆ ನಡೆಸಿದ ಅಲಿಸಿಯಾ, ವಿವಾಹೇತರ ಸಂಬಂಧ ಹೊಂದಿದ್ದ ಪುರುಷರಿಗಿಂತ ಮಹಿಳೆಯರು ಹೆಚ್ಚು ಖುಷಿಯಾಗಿದ್ದರು ಎಂದಿದ್ದಾರೆ. ಪತಿಗೆ ಮೋಸ ಮಾಡ್ತಿದ್ದ ಪತ್ನಿಯರು ಹೆಚ್ಚು ಖುಷಿ ಹಾಗೂ ಹೆಚ್ಚು ತೃಪ್ತಿ ಹೊಂದಿದ್ದರಂತೆ. ವಾರದಲ್ಲಿ ಎರಡು ಬಾರಿ ಶಾರೀರಿಕ ಸಂಬಂಧ ಬೆಳೆಸುತ್ತಿದ್ದರಂತೆ.

ಸಂಗಾತಿ ಜೊತೆ ಸೆಕ್ಸ್ ವಿಷ್ಯದಲ್ಲಿ ನೆಮ್ಮದಿ ಕಾಣದ ಮಹಿಳೆಯರು, ಇತರ ಕಾರಣಗಳಿಗೆ ವಿವಾಹೇತರ ಸಂಬಂಧ ಬೆಳೆಸಿದ ಮಹಿಳೆಯರಿಗಿಂತ ಹೆಚ್ಚು ಖುಷಿಯಾಗಿರುತ್ತಾರಂತೆ. ಸಾಮಾನ್ಯವಾಗಿ ಆನ್ಲೈನಲ್ಲಿಯೇ ಇನ್ನೊಂದು ಸಂಬಂಧಕ್ಕೆ ವಿವಾಹಿತರು ಹುಡುಕಾಟ ನಡೆಸುತ್ತಾರೆ. ಸಂಗಾತಿಯಿಂದ ಸಿಗದ ಸುಖಕ್ಕಾಗಿಯೇ ಹೆಚ್ಚಿನವರು ವಿವಾಹೇತರ ಸಂಬಂಧ ಬೆಳೆಸುತ್ತಾರೆಂದು ಅಧ್ಯಯನದಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...