alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಭಾರತದ ಮೊದಲ ಬಿದಿರಿನ ಸೈಕಲ್….

bamboo-cylce

ಪರಿಸರ ಸ್ನೇಹಿ ವಾಹನ ಯಾವುದು ಅಂದ್ರೆ ಎಲ್ರೂ ಹೇಳೋದು ಸೈಕಲ್ ಅಂತಾ. ಪರಿಸರ ಮಾಲಿನ್ಯ ಕಡಿಮೆ ಮಾಡ್ಬೇಕು ಅಂದ್ರೆ ಎಲ್ರೂ ಸೈಕಲ್ ಏರ್ಬೇಕು. ಇಂತಹ ಇಕೋ ಫ್ರೆಂಡ್ಲಿ ಸವಾರಿಯನ್ನು ವಿಜಯ್ ಶರ್ಮಾ ಬೇರೆ ಹಂತಕ್ಕೆ ಕೊಂಡೊಯ್ದಿದ್ದಾರೆ.

ಸಂಪೂರ್ಣವಾಗಿ ಬಿದಿರಿನಿಂದ್ಲೇ ಸೈಕಲ್ ಒಂದನ್ನು ತಯಾರಿಸಿದ್ದಾರೆ. ವಿಜಯ್ ತಂದೆ ಕಾರ್ಪೆಂಟರ್, ಚಿಕ್ಕಂದಿನಿಂದ್ಲೂ ಅವರು ಮಾಡ್ತಾ ಇದ್ದ ಕೆಲಸವನ್ನೆಲ್ಲ ನೋಡ್ತಾ ವಿಜಯ್ ಗೂ ಅದರಲ್ಲಿ ಆಸಕ್ತಿ ಹುಟ್ಟಿತ್ತು.

ಸೈಕಲ್ ನ ಇಡೀ ಫ್ರೇಮ್ ಬಿದಿರಿನಿಂದ್ಲೇ ತಯಾರಾಗಿದೆ, ಎಲ್ಲವನ್ನು ಒಗ್ಗೂಡಿಸಲು ಗ್ಲಾಸ್ ಅಥವಾ ಕಾರ್ಬನ್ ಫೈಬರ್ ಬದಲು ಸೆಣಬಿನ ನಾರನ್ನು ಬಳಸಿರುವುದು ವಿಶೇಷ. ಹ್ಯಾಂಡಲ್ ಬಾರ್, ಚಕ್ರ ಮತ್ತು ಪೆಡಲ್ ನಲ್ಲಿ ಮಾತ್ರ ಮೆಟಲ್ ಬಳಸಲಾಗಿದೆ. ಬಿದಿರು ಬಳಸಿರೋದ್ರಿಂದ ಸಮಯ ಮತ್ತು ಶಕ್ತಿ ಎರಡೂ ಉಳಿತಾಯವಾಗಿದೆ ಎನ್ನುತ್ತಾರೆ ವಿಜಯ್.

ಬಿದಿರಿನ ಸೈಕಲ್ ಹಗುರವಾಗಿರೋದ್ರಿಂದ ಓಡಿಸೋದು ಕೂಡ ಸುಲಭ. ಆದ್ರೆ ಭಾರತದಲ್ಲಿ ಬಿದಿರಿನ ಸೈಕಲ್ ಗಳಿಗಾಗ್ಲಿ, ಬೈಕ್ ಗಳಿಗಾಗ್ಲಿ ಬೇಡಿಕೆ ಇಲ್ಲ. 2015 ರಲ್ಲಿ ವಿಜಯ್ ಬಿದಿರಿನಿಂದ ಮಾಡಿದ 20 ಬೈಕ್ ಗಳನ್ನು ವಿದೇಶೀಯರಿಗೆ ಮಾರಾಟ ಮಾಡಿದ್ದಾರೆ. ಸದ್ಯ 4 ಚಕ್ರದ ಬ್ಯಾಟರಿ ಚಾಲಿತ ಸೈಕಲ್ ಅನ್ನು ವಿನ್ಯಾಸಗೊಳಿಸುವುದರಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...