alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತಮ ಲೈಂಗಿಕ ಜೀವನ ಬಯಸುವವರು ಹೀಗೆ ಮಾಡಿ

sexhelpdiet-m-1008-1462670817

ತೂಕ ಇಳಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತೇವೆ. ಪ್ರತಿದಿನ ವ್ಯಾಯಾಮದ ಜೊತೆಗೆ ಕಡಿಮೆ ಆಹಾರ ಸೇವನೆ ಮಾಡಿ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡ್ತೇವೆ. ಕಡಿಮೆ ಆಹಾರ ಸೇವನೆ ಮಾಡೋದ್ರಿಂದ ಕೇವಲ ತೂಕ ಮಾತ್ರ ಇಳಿಯೋದಿಲ್ಲ. ಇದ್ರಿಂದ ಇನ್ನೊಂದು ಮಹತ್ವದ ಪ್ರಯೋಜನವಿದೆ.

ಯಸ್, ಕಡಿಮೆ ಆಹಾರ ಸೇವನೆ ಮಾಡೋದ್ರಿಂದ ನಿಮ್ಮ ಲೈಂಗಿಕ ಜೀವನ ಸುಖಕರವಾಗಿರುತ್ತದೆ. ಅಧ್ಯಯನವೊಂದು ಇದಕ್ಕೆ ಪುಷ್ಠಿ ನೀಡಿದೆ. ಕಡಿಮೆ ಆಹಾರ ಸೇವನೆ ಮಾಡೋದ್ರಿಂದ ಕ್ಯಾಲೋರಿ ಕಡಿಮೆಯಾಗಿ ತೂಕ ಇಳಿಯುತ್ತದೆ. ಇದ್ರ ಜೊತೆಗೆ ನಿಮ್ಮ ಮೂಡ್ ಸರಿಯಾಗಿರುತ್ತದೆ. ಒತ್ತಡ ಕಡಿಮೆ ಮಾಡಿ ಲೈಂಗಿಕ ಜೀವನ ಖುಷಿಯಾಗಿರುವಂತೆ ಮಾಡುತ್ತದೆ.

ಲೂಸಿಯಾನಾದ ರಿಸರ್ಚ್ ಸೆಂಟರ್ ಒಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಎರಡು ವರ್ಷಗಳ ಕಾಲ 218 ವಯಸ್ಕ ಜೋಡಿಯನ್ನು ಅಧ್ಯಯನಕ್ಕೆ ಬಳಸಿಕೊಂಡಿತ್ತು. ಇವರನ್ನು ಎರಡು ಗುಂಪುಗಳಾಗಿ ವಿಂಗಡನೆ ಮಾಡಿತ್ತು. ಒಂದು ಗುಂಪಿಗೆ 25 ಕ್ಯಾಲೋರಿ ಕಡಿಮೆ ಆಹಾರ ಸೇವನೆ ಮಾಡುವಂತೆ ಹೇಳಿತ್ತು. ಮತ್ತೊಂದು ಗುಂಪಿಗೆ ಪ್ರತಿದಿನ ಅವರು ಸೇವಿಸುವ ಆಹಾರ ಪದ್ಧತಿಯನ್ನು ಅನುಸರಿಸುವಂತೆ ಹೇಳಿತ್ತು.

ಕಡಿಮೆ ಕ್ಯಾಲೋರಿ ಆಹಾರ ಸೇವನೆ ಮಾಡಿದ್ದವರ ತೂಕ ಕಡಿಮೆಯಾಗುವ ಜೊತೆಗೆ ಸುಖಕರ ನಿದ್ರೆ ಬರುವುದಲ್ಲದೆ ಅವರ ಲೈಂಗಿಕ ಜೀವನ ಕೂಡ ಸುಖಕರವಾಗಿತ್ತು. ಆರೋಗ್ಯಕರ ವ್ಯಕ್ತಿಗಳು ಕಡಿಮೆ ಕ್ಯಾಲೋರಿ ಆಹಾರ ತಿನ್ನುವುದು ಒಳ್ಳೆಯದಲ್ಲ. ಹೆಚ್ಚು ತೂಕ ಹೊಂದಿರುವವರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...