alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಯುವ ಮುನ್ನ 4 ವರ್ಷದ ಮಗಳಿಗೆ ತಾಯಿ ಕಲಿಸಿದ್ಲು ಈ ಎಲ್ಲ ಕೆಲಸ

ಟೊಕಿಯೊದ ಹನಾ ಚಾನ್ ತಾಯಿ ಹೆಸರು ಚಿ. ಹನಾ ಚಾನ್ 4 ವರ್ಷದವಳಿದ್ದಾಗಲೇ ತಾಯಿಯಿಂದ ಎಲ್ಲ ಮನೆ ಕೆಲಸ ಕಲಿತಿದ್ದಳು. ಮಗಳಿಗೆ ಅಡುಗೆ ಮಾಡುವುದ್ರಿಂದ ಹಿಡಿದು ಬಟ್ಟೆ ಒಗೆಯುವವರೆಗೆ ಎಲ್ಲ ಕೆಲಸವನ್ನೂ ಹೇಳಿಕೊಟ್ಟಿದ್ದಳು ಚಿ. ಮಗಳು ಯಾರನ್ನೂ ಅವಲಂಬಿಸಬಾರದು ಎಂಬುದೇ ಚಿ ಉದ್ದೇಶವಾಗಿತ್ತು. ಇದಕ್ಕೂ ಒಂದು ಮಹತ್ವದ ಕಾರಣವಿದೆ. ಮಗಳಿಗೆ ಇಷ್ಟೆಲ್ಲ ಹೇಳಿ ಕೊಡಲು ಕಾರಣವಾಗಿದ್ದ ಚಿನ ಕ್ಯಾನ್ಸರ್.

2001ರಲ್ಲಿ ಚಿ, ಶಿಂಗೋ ಎಂಬಾತನನ್ನು ಮದುವೆಯಾಗಿದ್ದಳು. ಈ ಮೊದಲೇ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಿಗೆ ಮದುವೆ ನಂತ್ರ ನೋವು ಕಂಡಿರಲಿಲ್ಲ. ಅದೃಷ್ಟವಶಾತ್ ಚಿ ಹೆಣ್ಣು ಮಗು ಹನಾ ಚಾನ್ ಜನಿಸಿದ್ದಳು. ಹನಾಗೆ 8 ತಿಂಗಳಾಗ್ತಿದ್ದಂತೆ ಮತ್ತೆ ಕ್ಯಾನ್ಸರ್ ಭೂತ ಚಿ ಯನ್ನು ಕಾಡಲು ಶುರುಮಾಡಿತ್ತು.

ತನ್ನ ಸಾವು ಖಚಿತ ಎಂಬುದನ್ನು ಅರಿತ ಚಿ ಮಹತ್ವದ ನಿರ್ಧಾರಕ್ಕೆ ಬಂದ್ಲು. ತಾನಿರುವಾಗಲೇ ಮಗಳಿಗೆ ಎಲ್ಲವನ್ನೂ ಕಲಿಸಿದ್ಲು. ಮಗಳು ಯಾರ ಅವಲಂಭನೆಯೂ ಇಲ್ಲದೆ ಜೀವನ ನಡೆಸಬೇಕೆಂಬುದು ಚಿ ಉದ್ದೇಶವಾಗಿತ್ತು. ತಾಯಿ ಹೇಳಿದಂತೆ ಮಗಳು ಎಲ್ಲವನ್ನೂ ಕಲಿತ್ಲು. 2008ರಲ್ಲಿ ನಿರೀಕ್ಷೆಯಂತೆ ಚಿ ಹನಾ ಚಾನ್ ಹಾಗೂ ಪತಿಯನ್ನು ತೊರೆದ್ಲು. ಆಗ ಹನಾ ಚಾನ್ ಗೆ ಕೇವಲ 4 ವರ್ಷವಾಗಿತ್ತು.

ಕೆಲ ದಿನಗಳ ಹಿಂದಷ್ಟೆ ಹನಾ ಚಾನ್ ತಾಯಿಗೊಂದು ಪತ್ರ ಬರೆದಿದ್ದಾಳೆ. ಅದ್ರಲ್ಲಿ ತಾನು ಅಡುಗೆ ಮಾಡುವುದನ್ನು ಸಂಪೂರ್ಣವಾಗಿ ಕಲಿತಿದ್ದೇನೆ ಎಂದು ಬರೆದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...