alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಶಾಪಿಂಗ್ ಮಾಡ್ತೀರಾ..? ಹಾಗಿದ್ರೆ ಇದನ್ನು ಓದಿ !

9693condom

ಅಗ್ಗದ ಬೆಲೆಯಲ್ಲಿ ವಸ್ತುಗಳನ್ನು ಕೊಳ್ಳಬಹುದು ಅಂತಾ ಆನ್ ಲೈನ್ ಶಾಪಿಂಗ್ ಮಾಡ್ತೀರಾ..? ಹೋಗೋ ಖರ್ಚೂ ಉಳಿಯುತ್ತೆ. ಕಡಿಮೆ ದರದಲ್ಲಿ ಮನೆ ಬಾಗಿಲಿಗೆ ಹೇಳಿದ ಐಟಂ ಬರುತ್ತೆ ಅಂತೀರಾ..? ಹಾಗಿದ್ರೆ ನೀವಿದನ್ನು ಓದಲೇ ಬೇಕು.!

ಹೌದು. ಅಗ್ಗದ ದರದಲ್ಲಿ ಅಕ್ಕಿಯಿಂದ ಹಿಡಿದು ಆಟಿಕೆ ವಸ್ತುಗಳವರೆಗೂ ಪೂರೈಸುವ ಚೀನಾ, ಇದೀಗ ಆನ್ ಲೈನ್ ಮೂಲಕ ನಕಲಿ ಕಾಂಡೋಮ್ ಮಾರಾಟ ಮಾಡುತ್ತಿದ್ದು, ಒಂದೊಮ್ಮೆ ಮುಜುಗರ ಬೇಡ ಎಂದು ಈ ಕಾಂಡೋಮ್ ಗಳನ್ನೂ ಆನ್ ಲೈನ್ ನಲ್ಲಿಯೇ ತರಿಸಿದರೆ ನಿಮಗೆ ಅಪಾಯ ಗ್ಯಾರಂಟಿ.

ಹೆಸರಾಂತ ಕಂಪನಿಗಳ ವಸ್ತುಗಳನ್ನು ನಕಲು ಮಾಡುವ ಚೀನಾ, ಪ್ರತಿ ವರ್ಷ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ 100 ಕೋಟಿ ಕಾಂಡೋಮ್ ಗಳನ್ನು ಮಾರಾಟ ಮಾಡುತ್ತಿದ್ದು, ಈ ನಕಲಿ ಕಾಂಡೋಮ್ ಗಳನ್ನು ಆನ್ ಲೈನ್ ಮಾರುಕಟ್ಟೆಯ ಮೂಲಕ ಜನರಿಗೆ ತಲುಪಿಸುತ್ತಿದೆ. ಈ ವಿಷಯ ಚೀನಾದಿಂದ ಬಂದಿದ್ದ 6 ಲಕ್ಷ ನಕಲಿ ಕಾಂಡೋಮ್ ಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡ ನಂತರ ಬಳಕಿಗೆ ಬಂದಿದ್ದು ಆಘಾತಕ್ಕೆ ಕಾರಣವಾಗಿದೆ.

ಅದೇ ರೂಪು, ವಿಭಿನ್ನ ಬಣ್ಣಗಳಲ್ಲಿ ಆಕರ್ಷಿಸುವ ಈ ಕಾಂಡೋಮ್ ಗಳು ಆರೋಗ್ಯಕ್ಕೆ ಹಾನಿ ಮಾಡುವುದರ ಜತೆಗೆ ನಿಮ್ಮ ‘ಇಚ್ಚೆ’ಗೆ ವಿರುದ್ದವಾಗಿ ಕೆಲಸ ಮಾಡುತ್ತದೆಯಂತೆ. ಹಾಗಾಗಿ ಕಾಂಡೋಮ್ ಅನ್ನು ಆನ್ ಲೈನ್ ನಲ್ಲಿ ಖರೀದಿಸುವ ಮುನ್ನ ಎಚ್ಚರ ವಹಿಸುವುದು ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...