alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಸಾಕುತ್ತಿದ್ದೀರಾ..? ಹಾಗಿದ್ರೆ ನೀವಿದನ್ನು ಓದಲೇಬೇಕು

dog 45789

ಮನುಷ್ಯರಿಗೆ ಆಹಾರ ಪದ್ಧತಿ ಇರುವಂತೆಯೇ ಪ್ರಾಣಿಗಳಿಗೂ ಇರುತ್ತದೆ. ಕೆಲವು ಆಹಾರಗಳನ್ನು ತಿಂದರೆ ಪ್ರಾಣಿಗಳಿಗೆ ಆಗಿಬರುವುದಿಲ್ಲ. ಹಾಗಾಗಿ ನೀವು ಸಾಕುವ ನಾಯಿಗಳಿಗೆ ಯಾವ ಬಗೆಯ ಆಹಾರ ಕೊಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ,

ಕೆಲವು ಸಂದರ್ಭಗಳಲ್ಲಿ ಮನುಷ್ಯರು ತಿನ್ನುವ ಆಹಾರ ಪದಾರ್ಥಗಳು ಕೂಡ ನಾಯಿಗೆ ಆಗಿಬರಲ್ಲ. ಕೆಲವು ಆಹಾರಗಳು ಅಜೀರ್ಣಕ್ಕೆ ಕಾರಣವಾದರೆ ಮತ್ತೇ ಕೆಲವು ತೀವ್ರವಾದ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆಲ್ಕೋಹಾಲ್ ಪದಾರ್ಥಗಳನ್ನು ಕೊಡುವುದರಿಂದ ಅಮಲು ಹೆಚ್ಚಿ ಕೋಮಾ ಸ್ಥಿತಿ ತಲುಪಿ ನಾಯಿ ಜೀವಕ್ಕೆ ಅಪಾಯವಾಗಬಹುದು. ಬೆಣ್ಣೆಹಣ್ಣು ನಾಯಿಗಳಿಗೆ ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತವೆ ಎನ್ನಲಾಗಿದೆ.

ಸಿಟ್ರಸ್ ಉತ್ಪನ್ನಗಳಿಂದ ನಾಯಿಗೆ ವಾಂತಿ ಬರುವ ಸಾಧ್ಯತೆ ಇರುತ್ತದೆ. ಮೀನು, ಮಾಂಸ ಮೊದಲಾದವುಗಳ ಮೂಳೆಯಿಂದಲೂ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗುತ್ತದೆ. ಹಸಿಮಾಂಸದಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ಕೊಳೆತ ಆಹಾರ ಪದಾರ್ಥಗಳನ್ನು ನಾಯಿಗಳಿಗೆ ಕೊಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದವರು. ಏನೇ ತೊಂದರೆ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದೊಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...