alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೈದ್ಯರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಬರ್ತಡೇ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ವೈದ್ಯರು ತಮ್ಮನ್ನು ಬದುಕಿಸಬಲ್ಲರೆಂಬ ಬಲವಾದ ನಂಬಿಕೆ ಇರುತ್ತದೆ. ಅದರಂತೆ ವೈದ್ಯರೂ ಶಕ್ತಿ ಮೀರಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ.

ಕೆಲ ವೈದ್ಯರು ತಮ್ಮ ವೃತ್ತಿ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಮೆಚ್ಚುಗೆಗೆ ಕಾರಣರಾಗುತ್ತಾರೆ. ಅಂತಹ ವೈದ್ಯರೊಬ್ಬರ ಅಪರೂಪದ ಕಾರ್ಯದ ಕುರಿತ ವರದಿ ಇಲ್ಲಿದೆ. ತಮ್ಮ ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ಅಹ್ಮದಾಬಾದ್ ಮೂಲದ 58 ವರ್ಷದ ಡಾ. ಶೈಲೇಶ್ ಥಕ್ಕರ್ ಹೆಸರಾಗಿದ್ದಾರೆ.

ಡಾ. ಶೈಲೇಶ್ ಥಕ್ಕರ್ ಈಗಾಗಲೇ ಕೆಲ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಆಶಕ್ತರ ನೆರವಿಗೆ ನಿಂತಿದ್ದು, ಈಗ ತಮ್ಮ ಹುಟ್ಟುಹಬ್ಬವನ್ನು 51 ಮಂದಿ ಬೀದಿ ಮಕ್ಕಳನ್ನು ದತ್ತು ಪಡೆಯುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಈ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ನಿರ್ಧರಿಸಿರುವ ಶೈಲೇಶ್ ಥಕ್ಕರ್, ಜೊತೆಗೆ ಇವರುಗಳ ಆಶ್ರಯಕ್ಕೆ ವ್ಯವಸ್ಥೆ ಮಾಡುವ ಸಲುವಾಗಿ ಹಾಸ್ಟೆಲ್ ಗಳನ್ನು ಸಂಪರ್ಕಿಸಿದ್ದಾರೆ. ಈ ಮಕ್ಕಳು ಎಲ್ಲಿಯವರೆಗೆ ಓದಲು ಬಯಸುತ್ತಾರೋ ಅಷ್ಟೂ ವೆಚ್ಚವನ್ನು ಭರಿಸುವ ಜೊತೆಗೆ ಮುಂದೆ ಉದ್ಯೋಗ ಪಡೆಯಲೂ ನೆರವಾಗಲಿದ್ದಾರೆ. ಡಾಕ್ಟರ್ ಶೈಲೇಶ್ ಥಕ್ಕರ್ ರ ಈ ಕಾರ್ಯಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...