alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಚಿತ್ರ ವೀಕ್ಷಿಸ್ತೀರಾ? ನಿಮ್ಮ ಸೆಕ್ಸ್ ಲೈಫ್ ಹಾಳಾಗಬಹುದು ಎಚ್ಚರ..!

download-1

ಪೋರ್ನ್ ಚಿತ್ರಗಳನ್ನು ನೋಡೋದು ಕೆಲವರಿಗೆ ಬಹಳ ಇಷ್ಟ. ಅಗತ್ಯ ಕೆಲಸಗಳನ್ನು ಬಿಟ್ಟು ಬ್ಲೂ ಫಿಲ್ಮ್ ನೋಡುವವರಿದ್ದಾರೆ. ಅಂಥವರ ಸಾಲಿಗೆ ನೀವೂ ಬರುವವರಾಗಿದ್ದಲ್ಲಿ ಈ ಸುದ್ದಿಯನ್ನು ಅವಶ್ಯವಾಗಿ ಓದಿ.

ಅಧ್ಯಯನವೊಂದರ ಪ್ರಕಾರ ನಿಯಮಿತವಾಗಿ ಪೋರ್ನ್ ನೋಡುವವರು ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ತಾರೆ. ಡೇಟಿಂಗ್ ಗೆ ಹೋಗೋದು ಅವರಿಗೆ ಇಷ್ಟವಾಗೋದಿಲ್ಲ. ಅದ್ರ ಅವಶ್ಯಕತೆಯೇ ಅವರಿಗಿರೋದಿಲ್ಲ. ಶಾರೀರಿಕ ಸಂಬಂಧ ಬೆಳೆಸುವುದಕ್ಕಿಂತ ಪೋರ್ನ್ ನೋಡಿದ್ರೆ ಹೆಚ್ಚು ಆನಂದ ಸಿಗುತ್ತೆ ಎಂಬುದು ಅವರ ಅರಿವಿಗೆ ಬಂದ್ರೆ ಮುಗಿದೆ ಹೋಯ್ತು. ಹೀಗಾದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳುವ ಅವರು ಎಲ್ಲರಿಂದ ಪ್ರತ್ಯೇಕವಾಗಿರಲು ಬಯಸ್ತಾರೆ. ಇದು ಅವರ ದಾಂಪತ್ಯದ ಮೇಲೆ ಪ್ರಭಾವ ಬೀರುತ್ತದೆ.

ಅಧ್ಯಯನದ ಪ್ರಕಾರ, ಬಿಡಬೇಕೆಂದ್ರೂ ಪೋರ್ನ್ ನೋಡೋದನ್ನು ಬಿಡೋದಕ್ಕೆ ಸಾಧ್ಯವಾಗ್ತಿಲ್ಲವೆಂದಾದ್ರೆ ನೀವು ಈ ಚಟಕ್ಕೆ ದಾಸರಾಗಿದ್ದೀರಿ ಎಂದರ್ಥ. ಅದ್ರಲ್ಲೂ ಪೋರ್ನ್ ನೋಡಿದ ನಂತ್ರ ಕೀಳರಿಮೆ ಕಾಡ್ತಾ ಇದೆ. ನಿರಾಶೆಯಾಗುತ್ತೆ ಎಂದಾದಲ್ಲಿ ನೀವು ಸಂಪೂರ್ಣವಾಗಿ ಕೈತಪ್ಪಿ ಹೋಗಿದ್ದೀರಿ ಎಂದೇ ಅರ್ಥ. ನಿಮ್ಮ ಜೀವನದ ಮೇಲೆ ಇದು ಪರಿಣಾಮ ಬೀರಲಿದ್ದು, ಈ ಹಂತಕ್ಕೆ ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಒಳಿತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...