alex Certify
ಕನ್ನಡ ದುನಿಯಾ       Mobile App
       

Kannada Duniya

ಇದನ್ನು ಅನುಸರಿಸಿ, ಸುಲಭವಾಗಿ ಯಶಸ್ಸು ಗಳಿಸಿ

ಯಶಸ್ಸು ಗಳಿಸಬೇಕೆಂಬುದು ಎಲ್ಲರ ಸಾಮಾನ್ಯ ಬಯಕೆಯಾಗಿರುತ್ತದೆ. ಜೀವನದಲ್ಲಿ ಗುರಿ ತಲುಪಲು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಯಶಸ್ಸಿನ ಸೂತ್ರಗಳನ್ನು ಪಾಲಿಸುತ್ತಾರೆ. ಆದರೆ, ಮುಖ್ಯವಾಗಿ ಶಿಸ್ತು ಪಾಲಿಸುವುದನ್ನೇ ಮರೆಯುತ್ತಾರೆ.

ಜೀವನದಲ್ಲಿ ಶಿಸ್ತು ಮುಖ್ಯ. ಗುರಿ ತಲುಪುವ ಭರದಲ್ಲಿ, ಕಾರ್ಯ ಸಾಧನೆಯ ಒತ್ತಡದಲ್ಲಿ ಅಡ್ಡ ಮಾರ್ಗ ಅನುಸರಿಸುವುದಕ್ಕಿಂತ ಶಿಸ್ತಿನಿಂದ ಉತ್ತಮ ಮಾರ್ಗದಲ್ಲಿ ನಡೆದಲ್ಲಿ ಸಾಧನೆಗೆ ಬೆಲೆ ಬರುತ್ತದೆ.

ಬಹುತೇಕರು, ಯಶಸ್ಸು ಗಳಿಸಿದ ಮಹನೀಯರ ಜೀವನವನ್ನು ಅನುಸರಿಸಲು ಮುಂದಾಗುತ್ತಾರೆ. ಆದರೆ, ಶಿಸ್ತು ಮರೆಯುತ್ತಾರೆ. ಶಿಸ್ತು ಪಾಲಿಸಿದಲ್ಲಿ ಜೀವನ ಕ್ರಮಬದ್ಧವಾಗಿರುತ್ತದೆ ಎನ್ನುವುದು ತಿಳಿದವರ ಅಭಿಪ್ರಾಯವಾಗಿದೆ.

ಸಾಗುವ ದಾರಿಯಲ್ಲಿ ಅಡಚಣೆಗಳು ಸಹಜ. ಅಡ್ಡಾದಿಡ್ಡಿಯಾಗಿ ನುಗ್ಗುವುದಕ್ಕಿಂತ ಕ್ರಮಬದ್ಧವಾಗಿ ಸಾಗಿದಲ್ಲಿ ಯಾವುದೇ ಅಡಚಣೆಗಳು ಎದುರಾಗುವುದಿಲ್ಲ. ಎದುರಾದರೂ ಸುಲಭವಾಗಿ ಸಾಗಬಹುದು. ಶಿಸ್ತು, ನಿಯಮಗಳನ್ನು ಪಾಲಿಸುವುದು ಒಳ್ಳೆಯದು.

ಎಲ್ಲದಕ್ಕೂ ಶಿಸ್ತು ಪಾಲಿಸಬಾರದು. ಅತಿಯಾದ ಶಿಸ್ತು ಒಳ್ಳೆಯದಲ್ಲ ಎನ್ನುತ್ತಾರೆ ಕೆಲವರು. ಅದು ನಿಜ ಕೂಡ. ಎಲ್ಲಾ ಸಮಯ, ಸಂದರ್ಭಗಳು ಒಂದೇ ರೀತಿ ಇರುವುದಿಲ್ಲ. ಆದರೂ, ಜೀವನದಲ್ಲಿ ಶಿಸ್ತು, ಸಂಯಮ ಮುಖ್ಯ. ಅದು ಯಶಸ್ಸಿಗೆ ಸಹಕಾರಿಯಾಗುತ್ತದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...