alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ದಿಲೀಪ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ಹೇಗೆ…?

dileep

ಮಲಯಾಳಂ ಚಿತ್ರರಂಗದ ಅತಿ ದೊಡ್ಡ ವಿವಾದ ಇದು. ಮೋಹನ್ ಲಾಲ್ ಹಾಗೂ ಮುಮ್ಮುಟ್ಟಿಯನ್ನು ಬಿಟ್ರೆ ಮಾಲಿವುಡ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಇರೋದು ನಟ ದಿಲೀಪ್ ಗೆ. ಕಳೆದ ಫೆಬ್ರವರಿಯಲ್ಲಿ ನಡೆದ ನಟಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್ ರನ್ನು ನಿನ್ನೆಯೇ ಬಂಧಿಸಲಾಗಿದೆ.

ಕಳೆದ 2 ದಶಕಗಳಿಂದ ಚಿತ್ರರಂಗದಲ್ಲಿರೋ ದಿಲೀಪ್ 130ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. ನಟಿಯ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ದಿಲೀಪ್ ಕೈವಾಡವಿದೆ ಅನ್ನೋದು ಸದ್ಯದ ಆರೋಪ. ಈ ಕೇಸ್ ಗೆ ಸಂಬಂಧಿಸಿದಂತೆ ದಿಲೀಪ್ ಸಹೋದರ ಅನೂಪ್, ಮ್ಯಾನೇಜರ್ ಅಪ್ಪುನ್ನಿ, ಸ್ನೇಹಿತ ನಾದಿರ್ ಶಾನನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ನಟಿಯ ಮೇಲೆ ವೈಯಕ್ತಿಕ ದ್ವೇಷ ಹೊಂದಿದ್ದ ದಿಲೀಪ್ ದಾಳಿ ನಡೆಸಲು ಸುಪಾರಿ ನೀಡಿದ್ದರಂತೆ. ದೌರ್ಜನ್ಯಕ್ಕೊಳಗಾದ ನಟಿ ಹಿಂದೊಮ್ಮೆ ದಿಲೀಪ್ ಕುಟುಂಬಕ್ಕೆ ಆಪ್ತೆಯಾಗಿದ್ಲು. ಅದೇ ಸಮಯದಲ್ಲಿ ದಿಲೀಪ್ ಮಂಜು ವಾರಿಯರ್ ಳನ್ನು ಮದುವೆಯಾದ್ರು. ನಂತರ 2015ರಲ್ಲಿ ಇಬ್ಬರೂ ಬೇರೆಯಾಗಿದ್ದು, ಈಗ ಕಾವ್ಯಾ ಮಾಧವನ್ ಜೊತೆಗೆ ದಿಲೀಪ್ ಸಪ್ತಪದಿ ತುಳಿದಿದ್ದಾರೆ.

ಮಂಜು ವಾರಿಯರ್ ಹಾಗೂ ತನ್ನ ಸಂಬಂಧ ಹಳಸಲು ಆ ನಟಿಯೇ ಕಾರಣ ಅನ್ನೋ ಅನುಮಾನ ದಿಲೀಪ್ ಗಿತ್ತು. ಹಾಗಾಗಿಯೇ ದಿಲೀಪ್ ನಟಿ ಮೇಲೆ ದೌರ್ಜನ್ಯ ನಡೆಸಲು ಸುಪಾರಿ ಕೊಟ್ಟಿದ್ದರಂತೆ. ಫೆಬ್ರವರಿ 17ರಂದು ಪಲ್ಸರ್ ಸುನಿ ಮತ್ತಾತನ ಗ್ಯಾಂಗ್ ನಟಿಯ ಕಾರನ್ನು ಅಡ್ಡಗಟ್ಟಿ, ಕಾರಿನಲ್ಲೇ ಆಕೆಯ ಮೇಲೆ ದೌರ್ಜನ್ಯ ನಡೆಸಿತ್ತು. ಆ ದೃಶ್ಯವನ್ನೆಲ್ಲ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿತ್ತು.

ಈ ಕೃತ್ಯದಲ್ಲಿ ಚಿತ್ರರಂಗದವರ ಕೈವಾಡವಿದೆ ಅಂತಾ ನೊಂದ ನಟಿಯೇ ಆರೋಪ ಮಾಡಿದ್ಲು. ಆದ್ರೆ ಸಿಎಂ ಪಿನರಾಯಿ ವಿಜಯನ್ ಮಾತ್ರ ಅದನ್ನು ನಿರಾಕರಿಸುತ್ತಲೇ ಬಂದಿದ್ರು. ಪ್ರಮುಖ ಆರೋಪಿ ಪಲ್ಸರ್ ಸುನಿಯ ಕಾಲ್ ರೆಕಾರ್ಡ್ಸ್ ಚೆಕ್ ಮಾಡಿದಾಗ ಪೊಲೀಸರಿಗೆ ದಿಲೀಪ್ ಕೈವಾಡದ ಬಗ್ಗೆ ಸುಳಿವು ಸಿಕ್ಕಿದೆ. ದಿಲೀಪ್ ನ ಆಪ್ತರಿಗೆಲ್ಲ ಪಲ್ಸರ್ ಸುನಿ ಜೈಲಿನಿಂದ್ಲೂ ಕರೆ ಮಾಡಿದ್ದ.

ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಅಂತಾ ದಿಲೀಪ್ ವಾದಿಸುತ್ತಲೇ ಬಂದಿದ್ದಾರೆ. 1.5 ಕೋಟಿ ರೂಪಾಯಿ ಕೊಡುವಂತೆ ಬ್ಲಾಕ್ ಮೇಲ್ ಮಾಡಲಾಗಿದೆ ಅಂತಾ ಆರೋಪಿಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದ್ಲೇ ಈ ಪ್ರಕರಣದ ಸತ್ಯಾಸತ್ಯತೆ ಬಯಲಾಗಬೇಕಿದೆ. ನಟನ ಮೇಲಿರುವ ಆರೋಪ ಸಾಬೀತಾಗಿದ್ದೇ ಆದಲ್ಲಿ ಮಲಯಾಳಂ ಚಿತ್ರರಂಗಕ್ಕೆ ಅದೊಂದು ಕಪ್ಪು ಚುಕ್ಕೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...