alex Certify
ಕನ್ನಡ ದುನಿಯಾ       Mobile App
       

Kannada Duniya

ತೂಕ ಇಳಿಸಿಕೊಳ್ಳಲು ಬಯಸುವವರ ಊಟದಲ್ಲಿರಲಿ ಈ ಪದಾರ್ಥ

ಪ್ರತಿದಿನ ಅಡುಗೆ ಮನೆಯಲ್ಲಿ ವಸ್ತುಗಳನ್ನ ನೋಡಿರ್ತಿರಾ. ಆಹಾರವಾಗಿ ಸೇವಿಸ್ತೀರಾ. ಆದ್ರೆ ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತೆ ಎಂಬುದು ನಿಮಗೆ ಗೊತ್ತಿರೋದಿಲ್ಲ.

ಅಡುಗೆ ಮನೆಯಲ್ಲಿರುವ ಯಾವ ವಸ್ತುಗಳು ನಿಮ್ಮ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತವೆ ಅನ್ನೋದನ್ನು ನಾವು ಹೇಳ್ತೇವೆ. ಅದನ್ನು ಪ್ರತಿದಿನ ಬಳಸಿ, ನಿರಾಯಾಸವಾಗಿ ತೂಕ ಇಳಿಸಿಕೊಳ್ಳಿ.

ನಿಮ್ಮ ಊಟದಲ್ಲಿ ಹೆಸರುಬೇಳೆ ಇರಲಿ. ಅದರಲ್ಲಿ ವಿಟಮಿನ್ , ಬಿ ಮತ್ತು , ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದನ್ನು ತಿನ್ನುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಪೌಷ್ಠಿಕಾಂಶ ಕೂಡ ದೊರೆಯುತ್ತದೆ.

ವಾಲ್ನಟ್ ಕೂಡ ತೂಕ ಇಳಿಸಲು ನೆರವಾಗುತ್ತದೆ. ಇದರ ಜೊತೆಗೆ ಪಾಲಾಕ್ ಸೊಪ್ಪನ್ನು ನಿಮ್ಮ ಅಡುಗೆಯಲ್ಲಿ ಉಪಯೋಗಿಸಿ. ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಕೆ, ಮೆಗ್ನೀಸಿಯಮ್ ಮತ್ತು ಕಬ್ಬಿಣದ ಅಂಶವಿದ್ದುತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

ಹಣ್ಣುಗಳಲ್ಲಿ ಸೇಬು ಹಣ್ಣು ಹಸಿವನ್ನು ನೀಗಿಸುವುದಲ್ಲದೇ, ತೂಕ ಇಳಿಸಿಕೊಳ್ಳಲು ಸಹಕಾರಿ. ಬಾಳೆಹಣ್ಣು ಕೂಡ ತೂಕ ಇಳಿಸಿಕೊಳ್ಳುವವರಿಗೆ ಒಳ್ಳೆಯ ಆಹಾರ.

ಆಲಿವ್ ಆಯಿಲನ್ನು ಪ್ರತಿದಿನ ಆಹಾರದಲ್ಲಿ ಬಳಸುವವರಿಗೆ ತೂಕ ಜಾಸ್ತಿಯಾಗುವ ಭಯ ಇರುವುದಿಲ್ಲ.

ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ ಉಪಯೋಗಿಸಿ, ತೂಕ ಇಳಿಸಿಕೊಳ್ಳಿ. ಕಾಫಿ ತೂಕ ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...