alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಹಾವಿನಿಂದ ಕಚ್ಚಿಸಿಕೊಳ್ತಾರೆ ಭಕ್ತರು..!

SNAKE BITEಹಾವು ಅಂದ್ರೆ ಹೆದರಿ ಮಾರು ದೂರ ಓಡುವವರೇ ಹೆಚ್ಚು. ಆದ್ರೆ ರಾಜಸ್ತಾನದಲ್ಲಿ ಭಕ್ತರು ಹಾವಿನಿಂದ ಕಚ್ಚಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

ಇಲ್ಲಿನ ವೀರ್ ತೇಜಾ ದೇವಾಲಯದಲ್ಲಿ ಹಾವಿನ ಹಬ್ಬ ನಡೆಯುತ್ತೆ, ಆಗ ಹಾವಿನಿಂದ ಕಚ್ಚಿಸಿಕೊಂಡ್ರೆ ಒಳಿತಾಗುತ್ತೆ ಅನ್ನೋದು ಭಕ್ತರ ನಂಬಿಕೆ. ಪೌರಾಣಿಕ ಜಾನಪದ ನಾಯಕ ವೀರ್ ತೇಜಾ ಹೆಸರಲ್ಲಿ ನಡೆಯುವ ಹಬ್ಬ ಇದು, ದೇಶದ ನಾನಾ ಭಾಗಗಳಿಂದ ನೂರಾರು ಭಕ್ತರು ರಾಜಸ್ತಾನಕ್ಕೆ ಬರುತ್ತಾರೆ.

ತೇಜಾ, ಶಿವನ ಹನ್ನೊಂದು ಅವತಾರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ, ರಾಜಸ್ತಾನದ ಗ್ರಾಮೀಣ ಸಮುದಾಯಗಳಲ್ಲಿ ಅವನನ್ನು ಪೂಜಿಸಲಾಗುತ್ತದೆ. ಭಕ್ತರು ಕೈಯಲ್ಲಿ ಹಾವುಗಳನ್ನು ಹಿಡಿದುಕೊಂಡು, ಅವುಗಳಿಂದ ಕಚ್ಚಿಸಿಕೊಳ್ಳುತ್ತ ನೃತ್ಯ ಮಾಡುತ್ತಾರೆ. ಹಾವು ಕಚ್ಚಿದ್ರೆ ಖಾಯಿಲೆಗಳೆಲ್ಲ ಗುಣವಾಗಿ ಅದೃಷ್ಟ ದೊರೆಯುತ್ತದೆ ಅನ್ನೋ ನಂಬಿಕೆ ಇದೆ. ಹೀಗೆ ಸರ್ಪಗಳನ್ನು ಪ್ರಾರ್ಥಿಸಿದ್ರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಅನ್ನೋ ಪ್ರತೀತಿಯೂ ಇದೆ. ಹಿಂದು ಪುರಾಣದ ಪ್ರಕಾರ ಜನ್ಮ ಜಾತಕದಲ್ಲಿ ಋಣಾತ್ಮಕ ನಕ್ಷತ್ರಗಳಿದ್ರೆ ಅವರು ಹಾವಿಗೆ ಹಾಲೆರೆದು ಅವುಗಳನ್ನು ಕಾಡಿಗೆ ಬಿಡಬೇಕು ಎಂಬ ನಂಬಿಕೆಯೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...