alex Certify
ಕನ್ನಡ ದುನಿಯಾ       Mobile App
       

Kannada Duniya

ಹರಕೆ ರೂಪದಲ್ಲಿ ಚಪ್ಪಲಿ ಸಲ್ಲಿಸುತ್ತಾರೆ ಭಕ್ತರು..!

slippers

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲೊಂದು ವಿಶೇಷ ದೇವಾಲಯವಿದೆ. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಪಾಲ್ಗೊಳ್ಳುವ ಅಸಂಖ್ಯಾತ ಭಕ್ತರು ದೇವರಿಗೆ ಹಣ್ಣು, ಕಾಯಿ ಮೊದಲಾದ ಪೂಜಾ ಸಾಮಗ್ರಿಗಳಿಂದ ಭಕ್ತಿಯನ್ನು ಅರ್ಪಿಸದೇ, ಚಪ್ಪಲಿಯನ್ನು ಕಟ್ಟುತ್ತಾರೆ.

ಕಲಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಗೋಲಾ ಎಂಬ ಗ್ರಾಮದ ಹೊರವಲಯದಲ್ಲಿ ಮೂರು ಕಿಲೋ ಮೀಟರ್ ದೂರದ ಬೆಟ್ಟದ ಮೇಲೆ ಲಕ್ಕಮ್ಮ ದೇವಿ ನೆಲೆಸಿದ್ದಾಳೆ. ಇಲ್ಲಿ ನಡೆಯುವ ಜಾತ್ರೆಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿಸಿದ ದೇವಿಗೆ ಹರಕೆಯ ರೂಪದಲ್ಲಿ ಚಪ್ಪಲಿ ಸಲ್ಲಿಸುತ್ತಾರೆ. ದೇವಾಲಯದ ಮುಂಭಾಗದಲ್ಲಿರುವ ಮರಕ್ಕೆ ಚಪ್ಪಲಿ ಕಟ್ಟಿ ಹರಕೆ ತೀರಿಸಿ ಧನ್ಯತಾ ಭಾವ ಹೊಂದುತ್ತಾರೆ. ಮತ್ತೆ ಕೆಲವು ಭಕ್ತರು ಆ ಚಪ್ಪಲಿಗಳನ್ನು ತಲೆಗೆ ಮುಟ್ಟಿಸಿಕೊಂಡು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಬೇಡಿಕೊಳ್ಳುತ್ತಾರೆ.

ಹಿಂದಿನಿಂದಲೂ ಗೋಲಾ ಗ್ರಾಮದ ಲಕ್ಕಮ್ಮ ದೇವಿಗೆ ಭಕ್ತರು ಇದೇ ರೀತಿ ಚಪ್ಪಲಿ ಹರಕೆ ಸಲ್ಲಿಸುವುದು ರೂಢಿಯಲ್ಲಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ರಾಜ್ಯ, ಹೊರ ರಾಜ್ಯಗಳಿಂದ ಬರುವ ಅಸಂಖ್ಯಾತ ಭಕ್ತರು ಸಂಜೆಯಾಗುತ್ತಲೇ ಸಂಪೂರ್ಣ ಖಾಲಿಯಾಗುತ್ತಾರೆ. ರಾತ್ರಿ ಇಲ್ಲಿ ಭೂತ, ಪ್ರೇತಗಳ ಜಾತ್ರೆ ನಡೆಯುತ್ತದೆ ಎಂಬ ನಂಬಿಕೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...