alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಗರ್ಭಿಣಿಯಾಗ್ತಿದ್ದಂತೆ ಇನ್ನೊಂದು ಮದುವೆಯಾಗ್ತಾರೆ ಪುರುಷರು…!

ಭಾರತದಲ್ಲಿ ಮದುವೆಯನ್ನು ಒಂದು ಜನ್ಮಜನ್ಮಾಂತರದ ನಂಟು ಎನ್ನುವಂತೆ ನೋಡ್ತಾರೆ. ಆದ್ರೆ ಇದೇ ದೇಶದಲ್ಲಿ ಮದುವೆಗೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಪತ್ನಿ ಗರ್ಭಿಣಿಯಾಗ್ತಿದ್ದಂತೆ ಪತಿ ಇನ್ನೊಂದು ಮದುವೆಯಾಗುವ ಪದ್ಧತಿಯೂ ಇದೆ. ಇದಕ್ಕೆ ಕಾರಣ ಕೇಳಿದ್ರೆ ಆಶ್ಚರ್ಯವಾಗುತ್ತೆ.

ರಾಜಸ್ತಾನದ ಬಾರ್ಮರ್ ಜಿಲ್ಲೆಯ ದೇರಾಸರ್ ಗ್ರಾಮದಲ್ಲಿ ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ. ಹುಡುಗಿಯರಿಗೆ ಪತಿ ಇನ್ನೊಂದು ಮದುವೆಯಾಗ್ತಾನೆಂಬ ಸಂಗತಿ ಗೊತ್ತಿರುತ್ತದೆ. ಇದಕ್ಕೆ ವಿರೋಧ ಮಾಡದೆ ಈಗ್ಲೂ ಹಳೆ ಪದ್ಧತಿಯನ್ನು ಮುಂದುವರೆಸಿಕೊಂಡು ಬರ್ತಿದ್ದಾರೆ.

ಈ ಗ್ರಾಮದಲ್ಲಿ ನೀರಿನ ಸಮಸ್ಯೆಯಿದೆ. ದೂರದ ಪ್ರದೇಶಗಳಿಂದ ನೀರನ್ನು ತರಬೇಕು. ಗರ್ಭಿಣಿ ನೀರು ಹೊರುವುದು ಸೂಕ್ತವಲ್ಲ. ಹಾಗಾಗಿ ಪತ್ನಿ ಗರ್ಭಿಣಿಯಾಗ್ತಿದ್ದಂತೆ ಪತಿ ಇನ್ನೊಂದು ಮದುವೆಯಾಗ್ತಾನೆ. ಗರ್ಭಿಣಿ ಆರೈಕೆ ಮಾಡುವ ಜೊತೆಗೆ ಮನೆಗೆ ನೀರು ತರಲು ಒಬ್ಬರು ಬೇಕೆನ್ನುವ ಕಾರಣಕ್ಕೆ 2ನೇ ಮದುವೆಯಾಗ್ತಾರೆ.

ರಾಜಸ್ತಾನದಲ್ಲೊಂದೇ ಅಲ್ಲ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಕೂಡ ನೀರಿನ ಸಮಸ್ಯೆಯಿದೆ. ನೀರು ಹೊರಲೆಂದೇ ಪುರುಷರು ಎರಡೆರಡು ಮದುವೆಯಾಗ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...