alex Certify
ಕನ್ನಡ ದುನಿಯಾ       Mobile App
       

Kannada Duniya

2000 ರೂ. ನೋಟಿನ ಸೀರೆಗೆ ಮುಗಿಬಿದ್ದ ಮಹಿಳೆಯರು

seere

ಸೂರತ್: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, 2000 ರೂ. ಹಾಗೂ 500 ರೂ. ಮುಖಬೆಲೆಯ ನೋಟ್ ಗಳನ್ನು ಚಲಾವಣೆಗೆ ತರಲಾಗಿದೆ.

ನಗದು ಕೊರತೆ ಹಾಗೂ ಚಿಲ್ಲರೆ ಸಮಸ್ಯೆ ಎಲ್ಲೆಲ್ಲೂ ಕಂಡು ಬಂದಿದೆ. ಪಿಂಕ್ ಕಲರ್ ನ 2000 ರೂ. ಹೊಸ ನೋಟನ್ನು ಇನ್ನೂ ಎಷ್ಟೋ ಜನ ನೋಡೇ ಇಲ್ಲ.

ಈಗಾಗಲೇ 2000 ರೂ. ನೋಟಿನ ಚಿತ್ರಗಳಿರುವ ಸೀರೆಗಳು ಮಾರುಕಟ್ಟೆಗೆ ಬಂದಿವೆ. ಸೂರತ್ ನ ಸೀರೆ ವ್ಯಾಪಾರಿಗಳು ಹೊಸ 2000 ರೂ. ನೋಟಿನ ಚಿತ್ರವಿರುವ ಸೀರೆಗಳನ್ನು ಮಾರಾಟಕ್ಕೆ ಇಟ್ಟಿದ್ದು, ಮಹಿಳೆಯರಂತೂ ಮುಗಿಬಿದ್ದು ಖರೀದಿಸತೊಡಗಿದ್ದಾರೆ.

siere-23

ಪಿಂಕ್ ಕಲರ್ ಸೀರೆ ಸೂರತ್ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದೆ. ಸೀರೆ ವ್ಯಾಪಾರ ಜೋರಾಗಿದ್ದು, ಮಾರಾಟಗಾರರು ಖುಷಿಯಾಗಿದ್ದಾರೆ.

ಹೆಚ್ಚಿನ ಸೀರೆಗಳನ್ನು ಉತ್ಪಾದಿಸಿ ಬೇರೆ ಕಡೆಗೂ ಕಳುಹಿಸಲು ವ್ಯಾಪಾರಿಗಳು ಚಿಂತಿಸಿದ್ದಾರೆ. ಈಗಾಗಲೇ ಉತ್ತರಾಖಂಡ್, ಉತ್ತರ ಪ್ರದೇಶ, ಮಣಿಪುರ, ಪಂಜಾಬ್, ಗೋವಾ ರಾಜ್ಯಗಳಿಂದ ಬೇಡಿಕೆ ಬಂದಿದೆ.

2000 ರೂ. ನೋಟಿನ ಸೀರೆ ಮಹಿಳೆಯರಿಗೂ ಇಷ್ಟವಾಗಿದೆ. ಹೊಸ ನೋಟಿನ ಸೀರೆ ಸೂರತ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...