alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ಬದಲಿಗೆ ಈತ ಕುಡಿದಿದ್ದೇನು ಗೊತ್ತಾ…?

tumblr_n5otdpjzie1sntzdgo1_1280

ದೆಹಲಿಯಲ್ಲಿ 30 ವರ್ಷದ ವ್ಯಕ್ತಿಯೊಬ್ಬ ಬಾರ್ ಗೆ ಬಂದಿದ್ದ. ಮೇಲಿನಿಂದ ಹೊಗೆಯೇ ತುಂಬಿದ್ದ ಸ್ಪೆಷಲ್ ಕಾಕ್ಟೈಲ್ ನೋಡಿ ಅವನಿಗೆ ಚಪಲ ತಡೆದುಕೊಳ್ಳಲು ಸಾಧ್ಯವಾಗಿಲ್ಲ, ಒಂದೇ ಗುಟುಕಿಗೆ ಇಡೀ ಗ್ಲಾಸ್ ಖಾಲಿ ಮಾಡಿದ್ದಾನೆ. ಅದಾಗಿ ಸ್ವಲ್ಪ ಹೊತ್ತಿನಲ್ಲೇ ಅವನಿಗೆ ತೀವ್ರ ಹೊಟ್ಟೆ ನೋವು ಶುರುವಾಗಿತ್ತು.

ಹೊಟ್ಟೆ ದೊಡ್ಡದಾಗಿ ಊದಿಕೊಂಡು, ಉಸಿರಾಡಲು ಕೂಡ ಕಷ್ಟವಾಗುತ್ತಿತ್ತು. ಕೂಡಲೇ ಆತನನ್ನು ಗುರ್ಗಾಂವ್ ನ ಆಸ್ಪತ್ರೆಗೆ ದಾಖಲಿಸಲಾಯ್ತು. ಆತನ ಹೊಟ್ಟೆಯಲ್ಲಿ ದೊಡ್ಡದೊಂದು ರಂಧ್ರವಾಗಿಬಿಟ್ಟಿತ್ತು. ಲಿಕ್ವಿಡ್ ನೈಟ್ರೋಜನ್ ಕುಡಿದಿದ್ದರಿಂದ ಆತನ ಹೊಟ್ಟೆಯಲ್ಲಿ ರಂಧ್ರವಾಗಿದೆ.

ಲಿಕ್ವಿಡ್ ನೈಟ್ರೋಜನ್ ಅನ್ನು ಕುಡಿದಿದ್ದರಿಂದ ಅವನ ಹೊಟ್ಟೆ ಪೂರ್ತಿ ಫ್ರೀಝ್ ಆಗಿ ಬಿಟ್ಟಿತ್ತು. ಹೊಟ್ಟೆ ಸೇರಿದ ಮೇಲೆ ನೈಟ್ರೋಜನ್ ಗ್ಯಾಸ್ ಗೆ ಹೊರಹೋಗಲು ದಾರಿ ಇಲ್ಲದೇ ಇದ್ದಿದ್ರಿಂದ ಹೊಟ್ಟೆ ಪೂರ್ತಿಯಾಗಿ ಊದಿಕೊಂಡಿತ್ತು. ಆತನ ಸ್ಥಿತಿ ತೀರಾ ಚಿಂತಾಜನಕವಾಗಿತ್ತು.

ಕೂಡಲೇ ವೆಂಟಿಲೇಟರ್ ಅಳವಡಿಸಿದ ವೈದ್ಯರು ಹೊಟ್ಟೆಯನ್ನು ಪೂರ್ತಿಯಾಗಿ ಸ್ಕ್ಯಾನ್ ಮಾಡಿ ನೋಡಿದ್ದಾರೆ. ಹೊಟ್ಟೆಯ ಮಧ್ಯ ಭಾಗದಲ್ಲಿ ತೆರೆದ ಪುಸ್ತಕದಂತೆ ದೊಡ್ಡದಾದ ರಂಧ್ರವಾಗಿತ್ತು. ಸಣ್ಣಪುಟ್ಟ ರಂಧ್ರಗಳಿಗಾದ್ರೆ ಹೊಲಿಗೆ ಹಾಕಬಹುದು, ಆದ್ರೆ ಇಷ್ಟು ದೊಡ್ಡ ರಂಧ್ರವಾಗಿರಬಹುದು ಅನ್ನೋ ಕಲ್ಪನೆಯೂ ಇರಲಿಲ್ಲ ಅಂತಾ ವೈದ್ಯರು ತಿಳಿಸಿದ್ದಾರೆ.

ಹಾನಿಗೊಳಗಾಗಿದ್ದ ಹೊಟ್ಟೆಯ ಪ್ರದೇಶವನ್ನೆಲ್ಲ ತೆಗೆದುಹಾಕಿ ಉಳಿದ ಸಣ್ಣಪುಟ್ಟ ಅಂಗಾಂಗಗಳನ್ನೆಲ್ಲ ವೈದ್ಯರು ಮರುಜೋಡಣೆ ಮಾಡಿದ್ದಾರೆ. ಈ ಘಟನೆಯ ನಂತರ ವ್ಯಕ್ತಿಯ ಕುಡಿತದ ಚಟ ಕೂಡ ಸಂಪೂರ್ಣವಾಗಿ ಬಿಟ್ಟು ಹೋಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...