alex Certify
ಕನ್ನಡ ದುನಿಯಾ       Mobile App
       

Kannada Duniya

ನಿಯಮ ಉಲ್ಲಂಘಿಸಿದವರಿಗೆ ದಂಡದ ಜೊತೆ ಹೆಲ್ಮೆಟ್ ಗಿಫ್ಟ್

ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ್, ತಮ್ಮ ವಿಶಿಷ್ಟ ಕಾರ್ಯದ ಕಾರಣಕ್ಕೆ ಎಲ್ಲರ ಪ್ರಶಂಸೆಗೊಳಗಾಗಿದ್ದಾರೆ. ತಮ್ಮ ಡ್ಯೂಟಿ ಇರದಿದ್ದರೂ ಸಹೋದ್ಯೋಗಿ ಟ್ರಾಫಿಕ್ ಪೊಲೀಸರ ಜೊತೆ ಅವರು ಕಾರ್ಯ ನಿರ್ವಹಿಸುತ್ತಾರೆ.

ಅಲ್ಲದೇ ವಿಶೇಷ ದಿನಗಳಾದ ‘ರಕ್ಷಾ ಬಂಧನ್’ ಹಾಗೂ ‘ಭಾಯಿ ದುಜ್’ ನಂದು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರನ್ನು ತಡೆ ಹಿಡಿಯವ ಸಂದೀಪ್, ದಂಡ ವಿಧಿಸುತ್ತಾರಲ್ಲದೇ ಬಳಿಕ ಹೆಲ್ಮೆಟ್ ಧರಿಸದಿರುವುದರಿಂದಾಗುವ ಅನಾಹುತಗಳನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ ಹೆಲ್ಮೆಟ್ ಗಿಫ್ಟ್ ಆಗಿ ನೀಡುತ್ತಾರೆ.

ತಮ್ಮ ಕಾರ್ಯದ ಕುರಿತು ಮಾತನ್ನಾಡಿರುವ ಸಂದೀಪ್, ನನ್ನ ಸೇವಾವಧಿಯಲ್ಲಿ ನಡೆದಿರುವ ರಸ್ತೆ ಅಪಘಾತಗಳ ಪೈಕಿ ಶೇ. 90 ರಷ್ಟು ಸಾವುಗಳು ಹೆಲ್ಮೆಟ್ ಧರಿಸದೆ ಇರುವುದರಿಂದ ಸಂಭವಿಸಿವೆ. ಕೆಲವೊಬ್ಬರು ಹೆಲ್ಮೆಟ್ ಧರಿಸಿದ್ದರೂ ಬೆಲ್ಟ್ ಹಾಕಿಕೊಳ್ಳದ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಹೀಗಾಗಿ ಜನರಿಗೆ ತಿಳಿ ಹೇಳಲು ಆ ಮೂಲಕ ಸಾವು-ನೋವು ತಪ್ಪಿಸಲು ಈ ಕಾರ್ಯ ಮಾಡುತ್ತಿರುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...