alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಪ್ರಶಸ್ತಿ

delhi_airport

ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತದ ಹಾಗೂ ಸೆಂಟ್ರಲ್ ಏಷ್ಯಾದ ಅತ್ಯುತ್ತಮ ಏರ್ಪೋರ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೆದರ್ಲೆಂಡ್ ನ ಆ್ಯಮ್ ಸ್ಟರ್ಡ್ಯಾಮ್ ನಲ್ಲಿ ನಡೆದ ‘ವಿಶ್ವ ಏರ್ಪೋರ್ಟ್ ಅವಾರ್ಡ್ಸ್’ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ. ಸ್ಕೈಟ್ರಾಕ್ಸ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು ಮತ್ತೊಂದು ಪ್ರಶಸ್ತಿ ಪಡೆದಿರೋದು ಹೆಮ್ಮೆ ತಂದಿದೆ ಅಂತಾ ದೆಹಲಿ ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾಕರ ರಾವ್ ತಿಳಿಸಿದ್ದಾರೆ. ಪ್ರಯಾಣಿಕರ ಅಭಿಪ್ರಾಯ ಪಡೆದು ಸಮೀಕ್ಷೆ ನಡೆಸಿ 2017ರ ಏರ್ಪೋರ್ಟ್ ಅವಾರ್ಡ್ಸ್ ಪ್ರಕಟಿಸಲಾಗಿದೆ. ಈ ಸಮೀಕ್ಷೆಯಲ್ಲಿ 105 ರಾಷ್ಟ್ರಗಳ ವಿಮಾನ ಪ್ರಯಾಣಿಕರು ಪಾಲ್ಗೊಂಡಿದ್ದರು.

ಜುಲೈ 2016 ರಿಂದ 2017 ರವರೆಗೆ ಜಗತ್ತಿನ 550 ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಭವವನ್ನು ಸಂಗ್ರಹಿಸಿ ಈ ಸಮೀಕ್ಷೆ ಮಾಡಲಾಗಿದೆ. ಚೆಕ್ ಇನ್, ಅರೈವಲ್, ಟ್ರಾನ್ಸ್ ಫರ್, ಶಾಪಿಂಗ್, ಸೆಕ್ಯೂರಿಟಿ, ಇಮಿಗ್ರೇಶನ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. 2016ರ ‘ಏರ್ಪೋರ್ಟ್ ಸರ್ವೀಸ್ ಕ್ವಾಲಿಟಿ ಅವಾರ್ಡ್ಸ್’ನಲ್ಲಿ ಭಾರತ ವಿಶ್ವದಲ್ಲಿ 2ನೇ ಸ್ಥಾನ ಪಡೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...