alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಎಟಿಎಂ ವ್ಯವಹಾರ ಸೇಫಾಗಿರಲು ಇದನ್ನು ತಪ್ಪದೇ ಮಾಡಿ….

Man using a ATM

ಡೆಬಿಟ್ ಕಾರ್ಡ್ ಮಾಹಿತಿ ಸೋರಿಕೆ ಪ್ರಕರಣ ಗ್ರಾಹಕರನ್ನು ಬೆಚ್ಚಿಬೀಳಿಸಿದೆ. ಸೋರಿಕೆ ತಡೆಯಲು ಬ್ಯಾಂಕ್ ಗಳು ಕೂಡ ತ್ವರಿತ ಕ್ರಮಗಳನ್ನು ಕೈಗೊಂಡಿವೆ. ನಿಮ್ಮ ಎಟಿಎಂ ಕಾರ್ಡ್ ನಿಂದ ಹಣ ಕಳುವಾಗದೇ ಇರುವಂತೆ ಸುರಕ್ಷಿತ ವ್ಯವಹಾರ ನಡೆಸೋದು ಹೇಗೆ ಅನ್ನೋದನ್ನು ನಾವ್ ಹೇಳ್ತಿವಿ. ಅದಕ್ಕೆ ಸಿಂಪಲ್ ಟಿಪ್ಸ್ ಇಲ್ಲಿದೆ.

ನಿಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ಎಸ್ ಎಂ ಎಸ್ ಮತ್ತು ಇಮೇಲ್ ಅಲರ್ಟ್ ನಿಮ್ಮ ಮೊಬೈಲ್ ಗೆ ಬರುವಂತೆ ಮಾಡಿಕೊಳ್ಳಿ. ಆಗ ನಿಮ್ಮ ಖಾತೆಯಿಂದೇನಾದ್ರೂ ಹಣ ವಿತ್ ಡ್ರಾ ಮಾಡಿದಲ್ಲಿ ತಕ್ಷಣ ನಿಮಗೆ ಮೆಸೇಜ್ ಬರುತ್ತದೆ.

ನಿಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ಪರೀಕ್ಷಿಸಿ.

ಆಗಾಗ ನಿಮ್ಮ ಪಾಸ್ ವರ್ಡ್ ಅನ್ನು ಅಪ್ ಡೇಟ್ ಮಾಡುತ್ತಿರಿ. ಆ್ಯಂಟಿ ವೈರಸ್ ಸಾಫ್ಟ್ ವೇರ್ ಬಳಸಿ, ಅದನ್ನೂ ಅಪ್ ಡೇಟ್ ಮಾಡಲು ಮರೆಯಬೇಡಿ.

ಭ್ರದತಾ ಸಿಬ್ಬಂದಿ ಇಲ್ಲದ ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡುವ ಮುನ್ನ ಎಚ್ಚರ.

ಒಂದೇ ಬಾರಿ ದೊಡ್ಡ ಮೊತ್ತದ ವಹಿವಾಟು ತಪ್ಪಿಸಲು ನಿಮ್ಮ ನಿತ್ಯದ ವಹಿವಾಟನ್ನು ಕೊಂಚ ಹೆಚ್ಚಿಸಿಕೊಳ್ಳಿ.

ಬೇರೆ ಬೇರೆ ಬ್ಯಾಂಕ್ ಗಳ ಎಟಿಎಂ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ನಿಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂಗಳನ್ನೇ ನೆಚ್ಚಿಕೊಳ್ಳಿ.

ವಹಿವಾಟಿನ ನಂತರ ಸ್ಲಿಪ್ ತೆಗೆದುಕೊಂಡಿದ್ದಲ್ಲಿ, ಕೂಡಲೇ ಅದನ್ನು ಹರಿದು ಹಾಕಿ.

ನಿಮ್ಮ ಎಟಿಎಂ ಕಾರ್ಡ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಿ.

ಎಟಿಎಂ ಕಾರ್ಡ್ ಬಳಸುವಾಗ ಅಪರಿಚಿತರಿಂದ ಸಹಾಯ ಪಡೆಯಬೇಡಿ.

ನಿಮ್ಮ ಎಟಿಎಂನಲ್ಲಿ ಚೆಕ್ ಅಥವಾ ಕಾರ್ಡ್ ಡೆಪಾಸಿಟ್ ಮಾಡಿದಲ್ಲಿ, ಎರಡು ದಿನಗಳ ಬಳಿಕ ಕ್ರೆಡಿಟ್ ಎಂಟ್ರಿಯನ್ನು ಪರೀಕ್ಷಿಸಿಕೊಳ್ಳಿ.

ಎಟಿಎಂನಿಂದ ಹೊರಹೋಗುವ ಮುನ್ನ ಕ್ಯಾನ್ಸಲ್ ಬಟನ್ ಒತ್ತಲು ಮರೆಯಬೇಡಿ, ನಿಮ್ಮ ಎಟಿಎಂ ಕಾರ್ಡ್ ಅನ್ನು ಕೂಡ ತೆಗೆದುಕೊಳ್ಳಿ.

ಎಟಿಎಂನಲ್ಲಿ ನಿಮ್ಮ ಕಾರ್ಡ್ ಸಿಕ್ಕಿಹಾಕಿಕೊಂಡಿದ್ದಲ್ಲಿ ಅಥವಾ ಹಣ ಬರದೇ ಇದ್ದಲ್ಲಿ ಕೂಡಲೇ ಬ್ಯಾಂಕ್ ಗೆ ತಿಳಿಸಿ.

ಎಟಿಎಂನ ಸನಿಹದಲ್ಲಿ ನಿಂತು ಯಾರ ಕಣ್ಣಿಗೂ ಬೀಳದ ರೀತಿಯಲ್ಲಿ ನಿಮ್ಮ ಎಟಿಎಂ ಪಿನ್ ನಂಬರ್ ಅನ್ನು ನಮೂದಿಸಿ.

ಎಟಿಎಂನಲ್ಲಿ ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವಲ್ಲಿ ಸಮಸ್ಯೆಯಾದರೆ ಬ್ಯಾಂಕಿಗೆ ಮಾಹಿತಿ ನೀಡಿ.

ಎಟಿಎಂ ಕಾರ್ಡ್ ನಿಮ್ಮ ವೈಯಕ್ತಿಕ ಬಳಕೆಗೆ ಇರುವಂಥದ್ದು. ಪಿನ್ ನಂಬರ್ ಅನ್ನು ಯಾರಿಗೂ ಹೇಳಬೇಡಿ. ನಿಮ್ಮ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಕೂಡ ಹೇಳುವುದು ಸೇಫ್ ಅಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...