alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಅಂತಿಮ ಯಾತ್ರೆಯಲ್ಲಿ ನೃತ್ಯ ಮಾಡಿದ ಮಕ್ಕಳು

ನಾಲ್ವರು ಹೆಣ್ಣು ಮಕ್ಕಳು ತಮ್ಮ ತಂದೆ ಅಂತಿಮ ಸಂಸ್ಕಾರವನ್ನು ಹಬ್ಬದಂತೆ ಆಚರಿಸಿದ್ದಾರೆ. ಶವದ ಅಂತಿಮ ಯಾತ್ರೆ ವೇಳೆ ನಾಲ್ವರು ಹೆಣ್ಣು ಮಕ್ಕಳು ನೃತ್ಯ ಮಾಡಿದ್ದಾರೆ. ತಂದೆ ಸಾವಿನಲ್ಲಿಯೂ ನೃತ್ಯ ಮಾಡ್ತಿದ್ದ ಮಕ್ಕಳನ್ನು ನೋಡಿ ಸ್ಥಳಿಯರು ಆಶ್ಚರ್ಯಕ್ಕೊಳಗಾಗಿದ್ದಾರೆ.

ನೋಯ್ಡಾದಲ್ಲಿ ಘಟನೆ ನಡೆದಿದೆ. ನೋಯ್ಡಾ ವಾಣಿಜ್ಯೋದ್ಯಮಿಗಳ ಸಂಘದ ಮಾಜಿ ಪದಾಧಿಕಾರಿಯಾಗಿರುವ ಹರಿ ಭಾಯಿ ಲಾಲ್ವಾನಿ ಅಂತಿಮ ಸಂಸ್ಕಾರದ ವೇಳೆ ಮಕ್ಕಳು ನೃತ್ಯ ಮಾಡಿದ್ದಾರೆ. ಹುಟ್ಟಿದ ವೇಳೆ ಸಂಭ್ರಮಿಸುವಂತೆ ಸತ್ತ ನಂತ್ರವೂ ಸಂಭ್ರಮದಲ್ಲಿಯೇ ಅಂತಿಮ ಸಂಸ್ಕಾರ ಮಾಡಬೇಕೆಂದು ಹರಿಭಾಯಿ ಬಯಸಿದ್ದರಂತೆ. ಜೀವನಕ್ಕಿಂತ ಮರಣ ಸುಂದರವಾಗಿರಬಹುದು. ಸುಂದರ ಮರಣಕ್ಕೆ ಹೋದವರನ್ನು ಖುಷಿಯಾಗಿ ಬೀಳ್ಕೊಡಬೇಕೆಂದು ಅವರು ಹೇಳ್ತಿದ್ದರಂತೆ.

ತಂದೆ ಆಸೆ ಈಡೇರಿಸಲು ಅಂತಿಮ ಸಂಸ್ಕಾರವನ್ನು ಅಳದೆ ನಗ್ತಾ ನಗ್ತಾ ಮಾಡಿರುವುದಾಗಿ ಹರಿಭಾಯಿ ಮಕ್ಕಳು ಹೇಳಿದ್ದಾರೆ. ಬೇರೆಯವರು ಏನು ಹೇಳ್ತಾರೆ ಎಂಬುದು ನಮಗೆ ಬೇಡ. ನಮ್ಮ ತಂದೆ ಅಂತಿಮ ಬಯಕೆ ಈಡೇರಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ ಮಕ್ಕಳು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...