alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿಯಾದ ಪ್ರೀತಿಯಲ್ಲೂ ಇದೆ ಅಪಾಯ…!

ಪ್ರೀತಿ ಮೇಲೆ ಜಗತ್ತು ನಿಂತಿದೆ. ಪ್ರೀತಿ ಇಲ್ಲದೆ ಸಂಬಂಧ ಗಟ್ಟಿಯಾಗೋಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ವ್ಯಕ್ತಿ ಪ್ರೀತಿಗೆ ಬಿದ್ದೇ ಬೀಳ್ತಾನೆ. ಪ್ರೀತಿಸಿದ ವ್ಯಕ್ತಿಯೇ ಪ್ರಪಂಚ ಎಂದುಕೊಳ್ತಾನೆ.

ಅತಿಯಾಗಿ ಪ್ರೀತಿಸಿದರೆ ಸಂಬಂಧ ಗಟ್ಟಿಯಾಗುತ್ತೆ ಎಂಬ ನಂಬಿಕೆಯಲ್ಲಿರುತ್ತಾರೆ ಕೆಲವರು. ಆದರೆ ಇದು ಅಜ್ಞಾನ. ಪ್ರೀತಿ ಮಿತಿ ಮೀರಿದರೆ ಅಪಾಯ ಗ್ಯಾರಂಟಿ. ಪ್ರೀತಿ ಮಾಡುವ ನೀವು ಈ ಬಗ್ಗೆ ತಿಳಿದಿರಿ.

ಪ್ರೀತಿಸಿದ ವ್ಯಕ್ತಿ ನಿಮ್ಮ ಜೊತೆ ಇರಬೇಕು. ಹಾಗಂತ ಸದಾ ನಿಮ್ಮ ಕಣ್ಣ ಮುಂದೆಯೇ ಇರಬೇಕೆಂದು ಬಯಸುವುದು ತಪ್ಪು. ನಿಮ್ಮ ಸಂಗಾತಿಗೆ ಬೇರೆ ಕೆಲಸವಿರುತ್ತದೆ. ನಿಮ್ಮ ಜೊತೆಯಲ್ಲಿಯೇ ಸಮಯ ಕಳೆಯುತ್ತಿದ್ದರೆ, ಹೊಟ್ಟೆ ತುಂಬುವುದಿಲ್ಲ ನೆನಪಿರಲಿ. ಈ ನಿಮ್ಮ ಒತ್ತಡ ಸಂಗಾತಿಗೆ ಕಿರಿಕಿರಿಯನ್ನುಂಟು ಮಾಡಬಹುದು ಎಚ್ಚರ.

ಸದಾ ನಿಮ್ಮ ಬಳಿ ಇರಬೇಕೆಂದು ಬಯಸುವುದು ತಪ್ಪು. ನಿಮಗೆ ಅಂಟಿಕೊಂಡು, ನಿಮ್ಮ ಜೊತೆ ಮಾತನಾಡುತ್ತ ಕಾಲ ಕಳೆಯಲು ಸಾಧ್ಯವಿಲ್ಲ. ಅವರಿಗೆ ಅವರದೆ ಆದ ಕೆಲವೊಂದಿಷ್ಟು ಭಾವನೆ, ಆಲೋಚನೆಗಳಿರುತ್ತವೆ ಎಂಬುದನ್ನು ನೆನಪಿಡಿ.

ಎಲ್ಲ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆಂಬ ನಿಯಮವಿಲ್ಲ. ಕೆಲವೊಂದನ್ನು ನಿಮ್ಮ ಸಂಗಾತಿ ಹೇಳದೆ ಇರಬಹುದು. ಚಿಕ್ಕ ಚಿಕ್ಕ ವಿಷಯವನ್ನು ಹೇಳು ಎಂದು ಪೀಡಿಸುವುದರಿಂದ ಸಂಗಾತಿಗೆ ನೋವುಂಟಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...