alex Certify
ಕನ್ನಡ ದುನಿಯಾ       Mobile App
       

Kannada Duniya

ದಿಯು & ದಮನ್: ದೇಶದ ಚೊಚ್ಚಲ ನಗದು ರಹಿತ ಪ್ರದೇಶ….

cashless

ಅರೇಬಿಯನ್ ಸಮುದ್ರ ತೀರದಲ್ಲಿರುವ ಸಣ್ಣ ಕೇಂದ್ರಾಡಳಿತ ಪ್ರದೇಶ ದಿಯು ಮತ್ತು ದಮನ್ ದೇಶದ ಮೊದಲ ನಗದುರಹಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಆಹಿರ್  ಅಲ್ಲಿನ ಆಡಳಿತಾಧಿಕಾರಿಗಳು ಕೈಗೊಂಡ   ಕ್ರಮವನ್ನು ಪ್ರಶಂಸಿಸಿದ್ದಾರೆ.

190 ತಂಡಗಳಾಗಿ ದಿಯು ಮತ್ತು ದಮನ್ ನಲ್ಲಿರುವ 25,000 ಮನೆಗಳಿಗೆ ಭೇಟಿ ನೀಡಿದ ಸ್ವಯಂ ಸೇವಕರು ನಗದು ರಹಿತ ವಹಿವಾಟಿನ ಪ್ರಯೋಜನಗಳು ಮತ್ತು ಅದನ್ನು ಮಾಡುವುದು ಹೇಗೆ ಅನ್ನೋದನ್ನು ತಿಳಿಹೇಳಿದ್ದಾರೆ. ಈಗ ಪ್ರತಿಯೊಬ್ಬರೂ ಅಲ್ಲಿ ಇ-ಪೇಮೆಂಟ್ ಮಾಡುತ್ತಿರುವುದು ವಿಶೇಷ.

ಇತ್ತೀಚೆಗಷ್ಟೆ ಇಲ್ಲಿ ವೈ-ಫೈ ಸೇವೆಯನ್ನು ಕೂಡ ಪರಿಚಯಿಸಲಾಗಿದೆ. 45 ದಿನಗಳ ಅವಧಿಯಲ್ಲಿ 32,000 ಪ್ರವಾಸಿಗರು ಹಾಗೂ ಸ್ಥಳೀಯರು 3,500 ಜಿಬಿ ಡೇಟಾವನ್ನು ಬಳಸಿದ್ದಾರೆ. ಜನರು ಕ್ಯಾಶ್ ಲೆಸ್ ವಹಿವಾಟನ್ನು ನೆಚ್ಚಿಕೊಳ್ಳುವುದರಿಂದ ಡಿಜಿಟಲ್ ಇಂಡಿಯಾ ಹಾಗೂ ಇ-ಟ್ರಾನ್ಸಾಕ್ಷನ್ ಯೋಜನೆಗೆ ಪ್ರೋತ್ಸಾಹ ಸಿಗಲಿದೆ ಅಂತಾ ಸಚಿವ ಆಹಿರ್ ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...