alex Certify
ಕನ್ನಡ ದುನಿಯಾ       Mobile App
       

Kannada Duniya

ತಮಿಳುನಾಡು ಕರಾವಳಿಗೆ ಅಪ್ಪಳಿಸಲಿದೆ ಚಂಡಮಾರುತ

cyclone

ತಮಿಳುನಾಡಿನಲ್ಲಿ ಚಂಡಮಾರುತದ ಭೀತಿ ಆವರಿಸಿದೆ. ಡಿಸೆಂಬರ್ 2ಕ್ಕೆ ತಮಿಳುನಾಡು ಕರಾವಳಿಯ ಚೆನ್ನೈ ಮತ್ತು ವೇದಾರನ್ನಿಯಂನಲ್ಲಿ ಚಂಡಮಾರುತ ಬೀಸಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳದ ಆಗ್ನೇಯ ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇನ್ನು 24 ಗಂಟೆಗಳಲ್ಲಿ ಅದು ಪಶ್ಚಿಮ-ವಾಯುವ್ಯ ಭಾಗದತ್ತ ಸಾಗಲಿದೆ.

ಇದರಿಂದಾಗಿ ಡಿಸೆಂಬರ್ 2 ರಂದು ಬೆಳಗ್ಗೆ ಚಂಡಮಾರುತ ಚೆನ್ನೈ ಹಾಗೂ ವೇದಾರನ್ನಿಯಂ ಅನ್ನು ದಾಟಿಕೊಂಡು ಹೋಗಲಿದೆ. ಇವತ್ತು ಸಂಜೆಯಿಂದ್ಲೇ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ.

ಆಳ ಸಮುದ್ರಕ್ಕೆ ತೆರಳಿರುವವರು ಕೂಡಲೇ ವಾಪಸ್ಸಾಗುವಂತೆ ಸೂಚನೆ ನೀಡಲಾಗಿದೆ. ಇವತ್ತು ಸಂಜೆಯಿಂದ್ಲೇ ತಮಿಳುನಾಡಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ. ತಮಿಳುನಾಡು ಹಾಗೂ ಪುದುಚೇರಿ ಕರಾವಳಿ ತೀರದಲ್ಲಿ ಡಿಸೆಂಬರ್ 1 ಮತ್ತು 2 ರಂದು ಭಾರೀ ಮಳೆಯಾಗಬಹುದು. ಅತ್ತ ಕೇರಳದಲ್ಲೂ ಡಿಸೆಂಬರ್ 2 ಮತ್ತು 3ರಂದು ಮಳೆಯಾಗುವ ಮುನ್ಸೂಚನೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...