alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನಕ್ಕೆ ಮುಂದಾದ ದಂಪತಿ ಒಂದಾಗಿದ್ದೇಗೆ ಗೊತ್ತಾ?

ಪ್ರೀತಿ, ಮದುವೆ, ಗಲಾಟೆ, ವಿಚ್ಛೇದನ. ಇತ್ತೀಚಿನ ದಿನಗಳಲ್ಲಿ ಇದು ಮಾಮೂಲಿಯಾಗಿದೆ. ಆದ್ರೆ ಈ ಪ್ರಕರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದೆ. ವಿಚ್ಛೇದನಕ್ಕಾಗಿ ಕೋರ್ಟ್ ಗೆ ಬಂದ ದಂಪತಿ ಹೊಟೇಲ್ ನಲ್ಲಿ ಮತ್ತೆ ಒಂದಾಗಿದ್ದಾರೆ.

ಘಟನೆ ಪಶ್ಚಿಮ ಬಂಗಾಳದ ಬಿರ್ಬಮ್ನಲ್ಲಿ ನಡೆದಿದೆ. ಗೌತಮ್ ದಾಸ್ ಹಾಗೂ ಅಹನಾ ಅನೇಕ ವರ್ಷಗಳಿಂದ ಪ್ರೀತಿ ಮಾಡ್ತಿದ್ದರು. 2016ರಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಮದುವೆ ನಂತ್ರ ಇಬ್ಬರ ಸಂಬಂಧ ಹಾಳಾಗಿದೆ. 2017 ರಲ್ಲಿ ಪತಿ ಮನೆಯಿಂದ ದೂರ ಹೋದ ಅಹಾನಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. 2018 ಜನವರಿ 16ರಂದು ವಿಚ್ಛೇದನ ಅರ್ಜಿ ಕೋರ್ಟ್ ಮುಂದೆ ಬಂದಿದೆ.

ವಿಚಾರಣೆ ವೇಳೆ ಪರ-ವಿರೋಧವನ್ನು ಆಲಿಸಿದ ನ್ಯಾಯಾಧೀಶರು ಎಲ್ಲರೂ ದಂಗಾಗಿಸುವ ತೀರ್ಪು ನೀಡಿದ್ದಾರೆ. ಇಬ್ಬರೂ ಮನೆ ಬಿಟ್ಟು ಮೂರು ದಿನ ಹೊಟೇಲ್ ನಲ್ಲಿರಿ ಎಂದಿದ್ದಾರೆ. ಇದಕ್ಕೆ ಪತಿ-ಪತ್ನಿ ಒಪ್ಪಲಿಲ್ಲ. ಜೊತೆಗೆ ನಮ್ಮ ಬಳಿ ಹಣವಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ನ್ಯಾಯಾಧೀಶ ಪಾರ್ಥಸಾರ್ತಿ ಹಣವನ್ನು ತಾನು ಕೊಡುವುದಾಗಿ ಹೇಳಿದ್ದಾರೆ. ಈ ಮಧ್ಯೆ ಸರ್ಕಾರಿ ವಕೀಲರು ತಾವು ಹೊಟೇಲ್ ಖರ್ಚು ಭರಿಸುವುದಾಗಿ ಹೇಳಿದ್ದಾರೆ. ಪೊಲೀಸರಿಂದ ರಕ್ಷಣೆ ನೀಡುವುದಾಗಿಯೂ ಕೋರ್ಟ್ ಹೇಳಿದೆ.

ಮುನಿಸಿಕೊಂಡೇ ಹೊಟೇಲ್ ರೂಮಿಗೆ ಹೋದ ದಂಪತಿ ಖುಷಿ-ಖುಷಿಯಾಗಿ ಹೊಟೇಲ್ ನಿಂದ ಹೊರಗೆ ಬಂದಿದ್ದಾರೆ. ಇನ್ನು ಎಂದೂ ದೂರವಾಗುವುದಿಲ್ಲ ಎಂದಿದ್ದಾರೆ. ನ್ಯಾಯಾಧೀಶರ ತೀರ್ಪು ಹಾಗೂ ದಂಪತಿ ನಿರ್ಧಾರ ಎರಡು ಕುಟುಂಬದ ಜೊತೆ, ಪರ-ವಿರೋಧಿ ವಕೀಲರಿಗೆ ಖುಷಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...