alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಯನ್ನು ಖುಷಿಪಡಿಸಲು ಇಲ್ಲಿದೆ ಟಿಪ್ಸ್

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಜೀವನ ವೆಚ್ಛ ಜಾಸ್ತಿಯಾಗಿದ್ದು, ಮನೆಯಲ್ಲಿ ಒಬ್ಬರ ದುಡಿಮೆಯೇ ಸಾಕಾಗಲ್ಲ. ಒಬ್ಬರಿಗೊಬ್ಬರು ಆಸರೆಯಾದರೆ ಕುಟುಂಬ ನಿರ್ವಹಣೆಗೂ ಅನುಕೂಲವಾಗುತ್ತದೆ ಎಂದು ಪತಿ, ಪತ್ನಿ ಇಬ್ಬರೂ ದುಡಿಯುತ್ತಾರೆ.

ಮಧ್ಯಮವರ್ಗದ ಕುಟುಂಬಗಳೆಂದರೆ ಸಾಮಾನ್ಯವಾಗಿ ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ. ಮನೆಯಲ್ಲಿದ್ದರೂ ಹೆಣ್ಣುಮಕ್ಕಳಿಗೇನು ಬಿಡುವಿರುವುದಿಲ್ಲ. ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಹೀಗೆ ಸದಾ ಕೆಲಸದ ಒತ್ತಡದಲ್ಲಿ ಇರುವವರಿಗೆ ರಿಲ್ಯಾಕ್ಸ್ ಬೇಕೇ ಬೇಕು. ನಿಮ್ಮ ಕೆಲಸದ ಒತ್ತಡ ಮುಂದಿಟ್ಟುಕೊಂಡು ಸಂಗಾತಿಯೊಂದಿಗೆ ಸಿಟ್ಟು ಸೆಡವು ಮಾಡದೇ ಆಪ್ತತೆಯಿಂದ ಮಾತಾಡಿ, ಸಿಟ್ಟಿನಲ್ಲಿ ಮಾತಾಡಿದರೆ ಅದು ಜಗಳಕ್ಕೆ ಕಾರಣವಾಗಿ ಅನಾಹುತ ಆಗಬಹುದಾದ ಸಾಧ್ಯತೆಗಳೂ ಕೂಡ ಇರುತ್ತವೆ.

ಅವರು ಹೇಳುವುದನ್ನು ಕೇಳಿಸಿಕೊಳ್ಳಿ ಪೂರಕವಾಗಿ ನೀವೂ ಮಾತನಾಡಿ, ಅಲ್ಲದೇ, ಅವರ ಸಣ್ಣಪುಟ್ಟ ಕೆಲಸಗಳಿದ್ದಲ್ಲಿ ನೀವೂ ನೆರವಾಗಿ, ಇದರಿಂದ ನನ್ನ ಜೊತೆಗೆ ಒಬ್ಬರು ಇದ್ದಾರೆ ಎಂಬ ಭಾವನೆ ಅವರಲ್ಲಿ ಬರುತ್ತದೆ. ಆಪ್ತ ಮಾತುಗಳಿಂದ ಸಂಗಾತಿಯನ್ನು ಖುಷಿಯಾಗಿಡಲು ಸಾಧ್ಯವಿದೆ ಎಂಬುದನ್ನು ತಿಳಿಯಿರಿ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...